ಜು.27 ಕ್ಕೆ ಬರಲಿದೆ ರಫೇಲ್ ವಿಮಾನ

22/07/2020

ನವದೆಹಲಿ ಜು.22 : ಎಲ್‍ಒಸಿಯಲ್ಲಿ ಪಾಕಿಸ್ತಾನ ಮತ್ತು ಎಲ್‍ಎಸಿಯಲ್ಲಿ ಚೀನಾ ತಂಟೆಗಳೆರಡನ್ನೂ ಪರಿಣಾಮಕಾರಿಯಾಗಿ ನಿಭಾಯಿಸುತ್ತಿರುವ ಭಾರತೀಯ ಸೇನೆಗೆ ಮತ್ತೊಂದು ಆನೆ ಬಲ ದೊರೆತಿದ್ದು, ಇದೇ ಜು.27ರಂದು ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನ ಆಗಮಿಸಲಿದೆ.
ಮೂಲಗಳ ಪ್ರಕಾರ ಇದೇ ಜುಲೈ 27ರಂದು ಫ್ರಾನ್ಸ್ ನಿರ್ಮಿತ ಐದು ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಆಗಮಿಸಲಿದ್ದು, ಫ್ರಾನ್ಸ್ ನ ಇಸ್ಟ್ರೆಸ್ ನಿಂದ ರಫೇಲ್ ಯುದ್ಧ ವಿಮಾನಗಳು ಟೇಕ್ ಆಫ್ ಆಗಲಿದೆ. ಫ್ರಾನ್ಸ್ ನ ಟ್ಯಾಂಕರ್ ವಾಹಕದ ಮೂಲಕ ಭಾರತಕ್ಕೆ ಆಗಮಿಸುತ್ತಿವೆ. ಟ್ಯಾಂಕರ್ ವಾಹಕ ಪ್ರಯಾಣದ ನಡುವೆ ಯುಎಇಯ ಅಬುದಾಬಿಯ ಅಲ್ ಧಫ್ರಾ ಏರ್ ಬೇಸ್ ನಲ್ಲಿ ಇಂಧನಕ್ಕಾಗಿ ಇಳಿಯಲಿದೆ. ಬಳಿಕ ಜುಲೈ 27ರಂದು ಹರ್ಯಾಣದ ಅಂಬಾಲಾ ಏರ್ ಬೇಸ್ ನಲ್ಲಿ ಲ್ಯಾಂಡ್ ಆಗಲಿವೆ. ಬಳಿಕ ಜು.29ರಂದು ಭಾರತೀಯ ವಾಯು ಪಡೆಗೆ ಸೇರ್ಪಡೆಯಾಗಲಿವೆ. ಹವಾಮಾನ ಸಹಕರಿಸಿದರೆ ಜುಲೈ 29ರಂದು ಹರಿಯಾಣದ ಅಂಬಾಲಾ ವಾಯು ನೆಲೆಯಲ್ಲಿ ಅವುಗಳ ಹಾರಾಟ ಪರೀಕ್ಷೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಬರುವ ಮತ್ತೊಂದು ಸ್ಕ್ವಾಡ್ರನ್‍ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಳ್ಳಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ.