ವಿಶ್ವದ ಅತಿದೊಡ್ಡ ಹಿಂದೂ ದೇವಾಲಯ

July 22, 2020

ಲಖನೌ ಜು.22 : ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಶ್ರೀರಾಮನ ಸುಂದರ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಇದಾಗಲೇ ತಯಾರಾಗಿದ್ದ ದೇವಾಲಯದ ನೀಲನಕ್ಷೆ ಗಾತ್ರ ಮತ್ತು ವಿನ್ಯಾಸದಲ್ಲಿ ಮಾರ್ಪಾಡು ಮಾಡಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಒಪ್ಪಿಗೆ ಸೂಚಿಸಿದ ಕಾರಣ ಅಯೋಧ್ಯೆಯ ಪ್ರಸ್ತಾವಿತ ರಾಮ ದೇವಾಲಯವು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದೆನಿಸಲಿದೆ.
ಏತನ್ಮಧ್ಯೆ, `ಭೂಮಿ ಪೂಜೆ’ ದಿನಾಂಕವನ್ನು ನಿಗದಿಪಡಿಸುವುದರೊಂದಿಗೆ, ದೇವಾಲಯದ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ಪ್ರಾರಂಭವಾಗಿದೆ. ಇಂಡಿಯನ್ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್‍ನ ಲಕ್ನೋ ಚಾಪ್ಟರ್ ಮಂಗಳವಾರ ದೇವಾಲಯದ ಟ್ರಸ್ಟ್ ಮುಖ್ಯಸ್ಥ ಮಹಂತ್ ನತ್ರ್ಯಗೋಪಾಲ್ ದಾಸ್ ಅವರಿಗೆ ಸುಮಾರು 34 ಕೆಜಿ ತೂಕದ ಇಟ್ಟಿಗೆಗಳನ್ನು ಕೊಡುಗೆಯಾಗಿ ನೀಡಿತು. ಮತ್ತೊಂದೆಡೆ ರಂಜಾಲ್ ಟ್ರಸ್ಟ್ 21,000 ರೂ.ಗಳ ಚೆಕ್ ಅನ್ನು ದೇವಾಲಯದ ಟ್ರಸ್ಟ್‍ಗೆ ಹಸ್ತಾಂತರಿಸಿತು.
ಯೋಜನೆಯ ಮುಖ್ಯ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಾಪುರ ಅವರ ಪುತ್ರರಾದ ವಾಸ್ತುಶಿಲ್ಪಿಗಳಾದ ನಿಖಿಲ್ ಸೋಮಾಪುರರ ಹಾಗೂ ಆಶಿಶ್ ಸೋಮಾಪುರ ಅವರು ದೇವಾಲಯದ ಮಾರ್ಪಡಿಸಿದ ವಿನ್ಯಾಸವನ್ನು ರಚಿಸಲಿದ್ದಾರೆ.

error: Content is protected !!