ಕೊಡಗಿನಲ್ಲಿ ಶನಿವಾರ ಲಾಕ್ ಡೌನ್ ಇಲ್ಲ : ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ರವರೆಗೆ ಕರ್ಫ್ಯೂ

22/07/2020

ಮಡಿಕೇರಿ ಜು. 22 :

ಸರ್ಕಾರದ ಇತ್ತೀಚಿನ ಆದೇಶದಂತೆ ಕೊಡಗು ಜಿಲ್ಲೆಯಲ್ಲಿ ಜುಲೈ 15 ರಿಂದ ಜುಲೈ 31 ರ ವರೆಗೆ ಜಾರಿಯಲ್ಲಿರುವಂತೆ ಹೊರಡಿಸಲಾಗಿದ್ದ ನಿರ್ಬಂಧಕಾಜ್ಞೆಯನ್ನು ಮಾರ್ಪಡಿಸಿದೆ.
ಜುಲೈ 25 ರ ಶನಿವಾರದಂದು ಪೂರ್ಣ ದಿನದ ಲಾಕ್‍ಡೌನ್ ಇರುವುದಿಲ್ಲ. ಜುಲೈ 26 ರ ಭಾನುವಾರದಂದು ಪೂರ್ಣ ದಿನದ ಲಾಕ್ ಡೌನ್ ಇರುತ್ತದೆ. ವಾರದ ಎಲ್ಲಾ ದಿನಗಳಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ರಾತ್ರಿ ಕಫ್ರ್ಯೂ ಜಾರಿಯಲ್ಲಿರುತ್ತದೆ. ಬೆಳಗ್ಗೆ 6 ರಿಂದ 8 ಗಂಟೆ ಮತ್ತು ಸಂಜೆ 5 ರಿಂದ 7 ಗಂಟೆಯವರೆಗೆ ಮಾತ್ರ ಉದ್ಯಾನವನಗಳಲ್ಲಿ ಸ್ಥಳೀಯರ ವಾಯು ವಿಹಾರಕ್ಕಾಗಿ ಈ ಹಿಂದೆ ಸಮಯ ನಿಗಧಿಪಡಿಸಲಾಗಿತ್ತು. ಆದರೆ, ಈ ಉದ್ಯಾನವನಗಳಲ್ಲಿ ಕುಳಿತುಕೊಳ್ಳುವ ಬೆಂಚ್‍ಗಳ ಬಳಕೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.