ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 298ಕ್ಕೆ ಏರಿಕೆ

22/07/2020

ಮಡಿಕೇರಿ ಜು. 22 : ಜಿಲ್ಲೆಯಲ್ಲಿ ಬುಧವಾರ 16 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಬೆಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ ಮೂರ್ನಾಡುವಿನ ಮುತ್ತಾರ್ಮುಡಿಯ ಬೈಲೆ ಬಾಣೆ ನಿವಾಸಿ 36 ವರ್ಷದ ಪುರುಷ ಮತ್ತು 35 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ರಾಣಿಪೇಟೆಯ ಹೇಮ್‍ರಾಜ್ ಕಾಂಪೌಂಡಿನ ನಿವಾಸಿ 44 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆಯ ವಡ್ಡರಮಾಡು ಗ್ರಾಮದ 40 ವರ್ಷದ ಪುರುಷನಿಗೂ ಸಹ ಕೋವಿಡ್-19 ಸೋಂಕು ದೃಢಪಟ್ಟಿದೆ.
ವಿರಾಜಪೇಟೆಯ ಬೆಕ್ಕೆ ಸೊಡ್ಲೂರುವಿನ ಈ ಹಿಂದೆ ಸೋಂಕು ದೃಢಪಟ್ಟಿದ್ದ ಮೈಸೂರು ಮೂಲದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 44 ವರ್ಷದ ಮಹಿಳೆಗೂ ಸಹ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ದಾಸವಾಳ ರಸ್ತೆಯ 37 ವರ್ಷದ ಪುರುಷನಿಗೆ ಹಾಗೂ ಈ ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರ ಪೇಟೆ ತಾಲೂಕಿನ ಶನಿವಾರಸಂತೆ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 32 ವರ್ಷದ ಮಹಿಳೆಗೂ ಸಹ ಸೋಂಕು ದೃಢಪಟ್ಟಿದೆ.
ಈ ಹಿಂದೆ ಸೋಂಕು ದೃಢಪಟ್ಟಿದ್ದ ಸೋಮವಾರಪೇಟೆ ತಾಲೂಕಿನ ತಾಳತ್ತರ ಶೆಟ್ಟಳ್ಳಿ ಗ್ರಾಮದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 47 ವರ್ಷದ ಪುರುಷ, 46 ವರ್ಷದ ಮಹಿಳೆ, 24 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ಜಯನಗರ 1 ನೇ ಬ್ಲಾಕಿನ 55 ವರ್ಷದ ಪುರುಷ, 24 ವರ್ಷದ ಮಹಿಳೆ ಮತ್ತು 20 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಈ ಹಿಂದೆ ಸೋಂಕು ದೃಢಪಟ್ಟಿದ್ದ ವಿರಾಜಪೇಟೆಯ ಹೆಗ್ಗಳ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 42 ವರ್ಷದ ಮಹಿಳೆಗೂ ಸೋಂಕು ದೃಢಪಟ್ಟಿದೆ.
ಕುಶಾಲನಗರದ ಕಣಿವೆ ಪೋಸ್ಟ್‍ನ ಹುಲುಸೆಯ 54 ವರ್ಷದ ಮಹಿಳೆ, ವಿರಾಜಪೇಟೆಯ ಗೋಣಿಕೊಪ್ಪದ 23 ವರ್ಷದ ಪುರುಷನಿಗೂ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಹೊಸದಾಗಿ 8 ಕಂಟೈನ್‍ಮೆಂಟ್ ಜೋನ್‍ಗಳನ್ನು ತೆರೆಯಲಾಗಿದೆ. ಬೈಲೆ ಬಾಣೆ ಮುತ್ತಾರ್‍ಮುಡಿ, ಮೂರ್ನಾಡು, ರಾಣಿಪೇಟೆ ಮಡಿಕೇರಿ, ವಡ್ಡರಮಾಡು ಗ್ರಾಮ, ವಿರಾಜಪೇಟೆ, ಬೆಕ್ಕೆಸೊಡ್ಲೂರು ವೀರಾಜಪೇಟೆ, ದಾಸವಾಳ ರಸ್ತೆ ಮಡಿಕೇರಿ, 1 ನೇ ಬ್ಲಾಕ್, ಜಯನಗರ, ಮಡಿಕೇರಿ, ಬೋರ್‍ವೆಲ್ ಎದುರು, ಹುಲುಸೆ, ಕಣಿವೆ ಪೋಸ್ಟ್, ಕುಶಾಲನಗರ, ಕಾವೇರಿ ಕಾಂಪ್ಲೆಕ್ಸ್, 2 ನೇ ಮಹಡಿ, ಸರ್ಕಾರಿ ಆಸ್ಪತ್ರೆ, ಗೋಣಿಕೊಪ್ಪ, ವೀರಾಜಪೇಟೆ ಇಲ್ಲಿ ಹೊಸದಾಗಿ 8 ಕಂಟೈನ್‍ಮೆಂಟ್ ಜೋನ್‍ಗಳನ್ನು ತೆರೆಯಲಾಗಿದೆ.
ಈ ಮೇಲಿನ ವಿಳಾಸವನ್ನು ಸೋಂಕಿತ ವ್ಯಕ್ತಿಯು ಫೋನ್ ಮೂಲಕ ನೀಡಿದ ಮಾಹಿತಿಯನ್ವಯ ಗುರುತಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ತೆರಳಿದ ಸಂದರ್ಭ ಸೋಂಕಿತ ವ್ಯಕ್ತಿ ನೀಡಿದ ವಿಳಾಸದಲ್ಲಿ ಬದಲಾವಣೆಗಳಾಗಬಹುದು.
ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 298 ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 210 ಮಂದಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಸದ್ಯ 83 ಸಕ್ರಿಯ ಕೋವಿಡ್-19 ಪ್ರಕರಣಗಳು ಜಿಲ್ಲೆಯಲ್ಲಿದ್ದು, 5 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿ ಕಂಟೈನ್‍ಮೆಂಟ್ ಜೋನ್‍ಗಳ ಸಂಖ್ಯೆ 115 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.