ಅರೆಭಾಷೆ ಕಥೆ ಹಾಗೂ ಕವಿತೆ ಸ್ಪರ್ಧೆ

22/07/2020

ಮಡಿಕೇರಿ ಜು. 22 : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಕಥೆ ಹಾಗೂ ಕವಿತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕಥಾ ಸ್ಪರ್ಧೆಯ ವಿಜೇತರಿಗೆ ಮೊದಲ ಬಹುಮಾನ ರೂ. 5 ಸಾವಿರ, ದ್ವಿತೀಯ ಬಹುಮಾನ ರೂ. 3 ಸಾವಿರ, ತೃತೀಯ ಬಹುಮಾನ ರೂ. 2 ಸಾವಿರ, ಕವಿತೆ ಸ್ಪರ್ಧೆ ವಿಜೇತರಿಗೆ ರೂ, 3 ಸಾವಿರ, ದ್ವಿತೀಯ ಬಹುಮಾನ ರೂ. 2 ಸಾವಿರ, ಮೂರನೇ ಬಹುಮಾನ ರೂ.1 ಸಾವಿರ ನೀಡಲಾಗುವುದು.
ಸ್ವಂತ ಬರಹ ಆಗಿರಬೇಕು, ಕತೆ ಒಂದು ಸಾವಿರ ಪದ ಮೀರಿರಬಾರದು, ಕವಿತೆ 30 ಸಾಲಿನ ಮಿತಿಯೊಳಗಿರಬೇಕು, ಒಬ್ಬರೇ ಎರಡೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರು ಮತ್ತು ವಿಳಾಸವನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದಿರಬೇಕು ಮತ್ತು ಕತೆ, ಕವಿತೆ ಒಬ್ಬರು ಒಂದಕ್ಕಿಂತ ಹೆಚ್ಚು ಕಳುಹಿಸುವಂತಿಲ್ಲ.
ಆ.8 ಕೊನೆಯ ದಿನವಾಗಿದ್ದು, ಮತ್ತೆ ಬಂದ ಬರಹಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.
ವಿಳಾಸ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಮಡಿಕೇರಿ. “ಕಾಫಿ ಕೃಪಾ” ಕಾಜಾಸೀಟ್ ರಸ್ತೆ, ಮಡಿಕೇರಿ. ಇಮೆಲ್ ವಿಳಾಸ : arebaseacademy@gmail.com