ವಿಶ್ವ ಅರೆಭಾಷೆ ಹಬ್ಬದ ಪ್ರಯುಕ್ತ ವಾಟ್ಸಪ್ ನೃತ್ಯ ಸ್ಪರ್ಧೆ

22/07/2020

ಮಡಿಕೇರಿ ಜು.22 : ಅಭಿನಯ ಕಲಾ ಮಿಲನ(ಟ್ರಸ್ಟ್) ನಾಟ್ಯ ಮಿಲನ ನೃತ್ಯ ಶಾಲೆ ಇವರ ಪ್ರಾಯೋಜಕತ್ವದಲ್ಲಿ ವಿಶ್ವ ಅರೆಭಾಷೆ ಹಬ್ಬ (ಆಟಿ-18) ದ ಪ್ರಯುಕ್ತ ಸಾಂಪ್ರದಾಯಿಕ ಕೊಡಗು ವಾಲಗದ ವಾಟ್ಸಪ್ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪ್ರಥಮ ಬಹುಮಾನ ರೂ.1 ಸಾವಿರ, ದ್ವಿತೀಯ ಬಹುಮಾನ ರೂ. 500 ನೀಡಲಾಗುವುದು.
ಒಂದು ತಂಡದಲ್ಲಿ ಒಬ್ಬರಿಗೆ ಮಾತ್ರ ಅವಕಾಶ, ಸ್ಪರ್ಧಿಗಳು ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ವಾಲಗ ಡ್ಯಾನ್ಸ್ ವೀಡಿಯೋ ಕಳುಹಿಸಬಹುದಾಗಿದೆ. ಡ್ಯಾನ್ಸ್ ನಾಲ್ಕು ನಿಮಿಷದ ಒಳಗಿರಬೇಕು, ವಯಸ್ಸಿನ ಮಿತಿ ಇಲ್ಲ, ವೀಡಿಯೋ ಕಳುಹಿಸಲು ಜು.31 ಕೊನೆಯ ದಿನ, ವೀಡಿಯೋ ಕಳುಹಿಸಬೇಕಾದ ವಾಟ್ಸ್‍ಪ್ ಸಂಖ್ಯೆ : 9483534131