ಅರೆಭಾಷೆಯಲ್ಲಿ ಕಾರ್ಡ್ ಕಥೆ ಸ್ಪರ್ಧೆ

22/07/2020

ಮಡಿಕೇರಿ ಜು.22 : ಸುಳ್ಯದ ಅಮರ ಮುಡ್ನೂರು ಮತ್ತು ಪಡ್ನೂರು ಪ್ರಯೋಜಕತ್ವದಲ್ಲಿ ವಿಶ್ವ ಅರೆಭಾಷೆ ಹಬ್ಬ (ಆಟಿ-18) ರ ಪ್ರಯುಕ್ತ ಅರೆಭಾಷೆಯಲ್ಲಿ ಕಾರ್ಡ್ ಕಥೆ ಸ್ಪರ್ಧೆ ಆಯೋಜಿಸಲಾಗಿದೆ.
ಪ್ರಥಮ ಬಹುಮಾನ ರೂ.1 ಸಾವಿರ, ದ್ವಿತೀಯ ಬಹುಮಾನ ರೂ.500 ನೀಡಲಾಗುವುದು.
ಕಥೆ ಬರೆಯುವವರು ಹದಿನೈದು ಸಾಲಿನ ಒಳಗೆ ಬರೆಯಬೇಕು, ಅರೆಭಾಷೆ ಜನ, ಜೀವನಗಳ ವಿಷಯಕ್ಕೆ ಹೆಚ್ಚು ಒತ್ತು ನೀಡಬೇಕು. ಕಥೆ ಕಳುಹಿಸಲು ಜು.31 ಕೊನೆಯದಿನವಾಗಿದ್ದು, ಕಥೆಯೊಂದಿಗೆ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿರಬೇಕು.
ಕಥೆ ಕಳುಹಿಸಬೇಕಾದ ಮೊ.ಸಂ : 8150827781