ಅರೆಭಾಷೆ ಸಂಸ್ಕೃತಿ ಬಿಂಬಿಸುವ ಮೊಬೈಲ್ ಫೋಟೋಗ್ರಫಿ ಸ್ಪರ್ಧೆ

22/07/2020

ಮಡಿಕೇರಿ ಜು. 22 : ವಿಶ್ವ ಅರೆಭಾಷೆ ಹಬ್ಬದ ಪ್ರಯುಕ್ತ ಸುಳ್ಯದ ರೂಪೇಶ್ ಫೋಟೋಗ್ರಫಿ ಪ್ರಾಯೋಜಕತ್ವದಲ್ಲಿ ಅರೆಭಾಷೆ ಸಂಸ್ಕೃತಿ, ಆಚಾರ ವಿಚಾರವನ್ನು ಬಿಂಬಿಸುವ ಮೊಬೈಲ್ ಫೋಟೋಗ್ರಫಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪ್ರಥಮ ಬಹುಮಾನ ರೂ.1 ಸಾವಿರ, ದ್ವಿತೀಯ ಬಹುಮಾನ ರೂ.500 ನೀಡಲಾಗುವುದು.
ಒಬ್ಬರು ಒಂದೇ ಫೋಟೋ ಕಳುಹಿಸಲು ಅವಕಾಶವಿದ್ದು, ಮೊಬೈಲ್ ಕ್ಯಾಮರಾದಲ್ಲಿ ತೆಗೆದ ಫೋಟೋಗಳನ್ನು ಮಾತ್ರ ಪರಿಗಣಿಸಲಾಗುವುದು. ಫೋಟೋ ಕಳುಹಿಸಲು ಕೊನೆಯ ದಿನ ಜು.31.
ಫೋಟೋ ಕಳುಹಿಸಬೇಕಾದ ಮೊ.ಸಂ : 8277132778, ವಾಟ್ಸಾಪ್‍ನೊಂದಿಗೆ angika multimedia facebook page ಟ್ಯಾಗ್ ಮಾಡಬೇಕು.