ಕಾಫಿ ತೋಟದಲ್ಲಿ ನವಿಲಿನ ಮೊಟ್ಟೆಗಳು

22/07/2020

ಮಡಿಕೇರಿ ಜು.22 : ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿರುವ ಪ್ರಕರಣಗಳು ಕೊಡಗಿನ ಬೆಳಗಾರರ ಸಹನೆಯನ್ನು ಪರೀಕ್ಷಿಸುತ್ತಿರುವ ಬೆನ್ನಲ್ಲೇ ನವಿಲುಗಳ ಸವಾರಿಯೂ ಆರಂಭವಾಗಿದೆ. ಶ್ರೀಮಂಗಲ ಕಾಯಿಮಾನಿ ಗ್ರಾಮದ ಬೊಜ್ಜಂಗಡ ಶೈಲ ಸುಬ್ರಮಣಿ ಅವರ ತೋಟದಲ್ಲಿ ನವಿಲು ಮೊಟ್ಟೆಗಳನ್ನು ಇಟ್ಟಿರುವುದು ಕಂಡು ಬಂದಿದೆ. ನವಿಲು ನಾಲ್ಕು ಮೊಟ್ಟೆಗಳನ್ನಿಟ್ಟಿದ್ದು, ತೋಟದ ಮಾಲೀಕರು ಮೊಟ್ಟೆಗಳಿಗೆ ಯಾವುದೇ ಹಾನಿಯಾಗದಂತೆ ನಿಗಾ ವಹಿಸಿದ್ದಾರೆ. ಕಾಡಾನೆಯೊಂದಿಗೆ ನವಿಲುಗಳು ಕೂಡ ಕಾಫಿ ತೋಟಗಳಲ್ಲಿ ಮರಿಗಳಿಗೆ ಜನ್ಮ ನೀಡಲು ಆರಂಭಿಸಿವೆ.