ನೀರು ಕೊಲ್ಲಿಯಲ್ಲಿ ಸಿಲುಕಿಕೊಂಡ ಕಾಡಾನೆ ಮರಿ
22/07/2020

ಮಡಿಕೇರಿ ಜು.22 : ತೋಟದಿಂದ ತೋಟಕ್ಕೆ ಅಲೆದಾಡುತ್ತಿರುವ ಕಾಡಾನೆಗಳ ಹಿಂಡಿನೊಂದಿಗಿದ್ದ ಮರಿಯಾನೆಯೊಂದು ತೋಟದ ನೀರು ಕೊಲ್ಲಿಯನ್ನು ದಾಟಲಾಗದೆ ಸಿಲುಕಿಕೊಂಡಿರುವ ಘಟನೆ ಕುಟ್ಟದ ತೈಲ ಗ್ರಾಮದಲ್ಲಿ ನಡೆದಿದೆ.
ಪ್ರತಿದಿನ ಹತ್ತಾರು ಕಾಡಾನೆಗಳು ದಕ್ಷಿಣ ಕೊಡಗಿನ ತೋಟಗಳ ಮೂಲಕ ಹಾದು ಹೋಗುತ್ತಿದ್ದು, ಕೆಲವು ಆನೆಗಳು ತೋಟದಲ್ಲೇ ಮರಿಗಳಿಗೆ ಜನ್ಮ ನೀಡುತ್ತಿವೆ. ಈ ರೀತಿ ತೋಟದಲ್ಲೇ ಬೆಳೆದ ಮರಿಯೊಂದು ದಾಟಲಾಗದೆ ಕೊಲ್ಲಿಯಲ್ಲಿ ಸಿಲುಕಿಕೊಂಡಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಆಗಮಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

