ಸೋಮವಾರಪೇಟೆಯಲ್ಲಿ ರಾತ್ರಿ ವೇಳೆ ಕರ್ಫ್ಯೂ ಉಲ್ಲಂಘನೆ : ಪೊಲೀಸರಿಂದ ಲಾಠಿ ಚಾರ್ಜ್

22/07/2020

ಮಡಿಕೇರಿ ಜು. 22 : ಸೋಮವಾರಪೇಟೆಯಲ್ಲಿ ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ವಿಧಿಸಿದ್ದ ರಾತ್ರಿ ಕಪ್ರ್ಯೂ ಉಲ್ಲಂಘಿಸಿ ವಾಹನಗಳಲ್ಲಿ ಸಂಚರಿಸುತ್ತಿದ್ದವರಿಗೆ ಮಂಗಳವಾರ ರಾತ್ರಿ ಪಟ್ಟಣದಲ್ಲಿ ಪೊಲೀಸರು ಲಾಟಿ ರುಚಿ ತೋರಿಸಿದ್ದಾರೆ.
ದಿನಂಪ್ರತಿ ರಾತ್ರಿ ವೇಳೆಯಲ್ಲಿ ಕೆಲವರು ಕಪ್ರ್ಯೂ ಉಲ್ಲಂಘಿಸಿತ್ತಿರುವುದನ್ನು ಮನಗಂಡ ಸರ್ಕಲ್ ಇನ್ಸ್‍ಪೆಕ್ಟರ್ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು ಮುಖ್ಯ ರಸ್ತೆಯಲ್ಲಿ ನಿಂತು ವಾಹನಗಳ ತಪಾಸಣೆ ನಡೆಸಿದರು. ಅನಾವಶ್ಯಕವಾಗಿ ಸಂಚರಿಸುತ್ತಿದ್ದ ದ್ವೀಚಕ್ರ ವಾಹನ ಚಾಲಕರು ಹಾಗು ರಸ್ತೆಯಲ್ಲಿ ತಿರುಗಾಡುತ್ತಿದ್ದವರಿಗೂ ಲಾಠಿ ರುಚಿ ತೋರಿಸಿದರು. ಜಿಲ್ಲಾಡಳಿತ ಸೂಚನೆ ಮೇರೆಗೆ ಕ್ರಮಗೊಳ್ಳಲಾಗಿದೆ. ಕಪ್ರ್ಯೂ ಸಂದರ್ಭ ಹೊರಬಂದವರಿಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿ.ಐ., ಎಚ್ಚರಿಸಿದರು.