ಕೊಡಗರಹಳ್ಳಿ ಗ್ರಾಮದ ಸಿಲ್‍ಡೌನ್ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ

July 22, 2020

ಸುಂಟಿಕೊಪ್ಪ,ಜು.22: ಎಸ್‍ಡಿಪಿಐ ವತಿಯಿಂದ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂರ್ಗ್ ಹಳ್ಳಿ ತೋಟದಲ್ಲಿ ಸಿಲ್‍ಡೌನ್ ಪ್ರದೇಶದ ನಿವಾಸಿಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.
ಕೊರ್ಗ್‍ಹಳ್ಳಿ ತೋಟದ ಯುವತಿ ಯೋರ್ವಳಿಗೆ ಕರೋನಾ ಸೋಂಕು ಕಂಡು ಬಂದಿತ್ತು. ಈಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿ 12 ಮನೆಗಳನ್ನು ಸಿಲ್‍ಡೌನ್‍ಗೊಳಿಸಲಾಗಿದ್ದು, ಈ ಬಾಗದ ತೋಟ ಕಾರ್ಮಿಕರೇ ನೆಲೆಸಿದ್ದು ಎಸ್‍ಡಿಪಿಐ ವತಿಯಿಂದ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶಿವಕುಮಾರ್, ಬಿಲ್‍ಕಲೆಕ್ಟರ್ ಧನಂಜಯ, ಸುಂಟಿಕೊಪ್ಪ ಗ್ರಾ.ಪಂ.ಸದಸ್ಯೆ ನಾಗರತ್ನ, ಎಸ್‍ಡಿಪಿಐ ಬಾಶಿತ್, ವಲಯಾಧ್ಯಕ್ಷ ಉಸ್ಮಾನ್, ಲತೀಫ್ ಹಾಗೂ ಜುಬೇರ್ ಇದ್ದರು.

error: Content is protected !!