ಕೊಡಗು ಜಿಲ್ಲೆಯಲ್ಲಿ ತ್ರಿಶತಕ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ.

23/07/2020

ಮಡಿಕೇರಿ ಜು. 23 : ಕೊಡಗು ಜಿಲ್ಲೆಯಲ್ಲಿ ಹೊಸದಾಗಿ 13 ಸೋಂಕು ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 311ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಹೈಸೊಡ್ಲೂರಿನ 50 ವರ್ಷದ ಪುರುಷ, 25 ವರ್ಷದ ಯುವತಿಗೆ ಸೋಂಕು ತಲುಗುಲಿದೆ. ಜೋಡುಬೀಟಿಯ 20 ವರ್ಷದ ಹಾಗೂ 23 ವರ್ಷದ ಯುವಕರಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯ 49 ವರ್ಷದ ಪುರುಷ ಹಾಗೂ 21 ವರ್ಷದ ಯುವಕ ಸೇರಿದಂತೆ ಮಡಿಕೇರಿಯ ಸುದರ್ಶನ ಬಡಾವಣೆಯ 32 ವರ್ಷ ಆರೋಗ್ಯ ಕರ್ಯಕರ್ತೆ ಹಾಗೂ ಮಡಿಕೇರಿ ಅರಣ್ಯ ಇಲಾಖೆಯ 44 ವರ್ಷದ ನೌಕರಿಗೂ ಸೋಂಕು ಪತ್ತೆಯಾಗಿದೆ.
ಸೋಮವಾರಪೇಟೆಯ 41 ವರ್ಷದ ಪುರುಷ, ಸೋಮವಾರಪೇಟೆ ತಾಲ್ಲೂಕಿನ ಅಬ್ಬೂರುಕಟ್ಟೆಯ 99 ವರ್ಷದ ಪುರುಷ ಹಾಗೂ ಕುಶಾಲನರದ ಹೆಬ್ಬಾಲೆಯ 31 ವರ್ಷದ ಪುರುಷನಿಗೂ ಸೋಂಕು ದೃಢಪಟ್ಟಿದೆ.
ವಿರಾಜಪೇಟೆ ತಾಲ್ಲೂಕಿನ ಅಪ್ಪಯ್ಯ ಸ್ವಾಮಿ ರಸ್ತೆಯ 75 ವರ್ಷದ ಮಹಿಳೆ ಹಾಗೂ 23 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 21 ಕಂಟೈನ್ಮೆಂಟ್ ಜೋನ್ ಅನ್ನು ಸಾರ್ವಜನಿಕರಿಗೆ ತೆರವುಗಳಿಸಲಾಗಿದೆ. ಮಡಿಕೇರಿ ತಾಲ್ಲೂಕಿನ ಬಾವಲಿ, ಚೇರಂಬಾಣೆ, ವಿರಾಜಪೇಟೆಯ ಅಪ್ಪಯ್ಯಸ್ವಾಮಿ ರಸ್ತೆ, ಸೋಮವಾರಪೇಟೆ ತಾಲ್ಲೂಕಿನ ಬೊಳ್ಳೂರು, ಹೆಬ್ಬಾಲೆ ಮುಖ್ಯ ರಸ್ತೆ ಪ್ರದೇಶ, ಮಣಜೂರು, ಗೋಣಿಕೊಪ್ಪ ಮೋರ್ ಸ್ಟೋರ್ ಎದುರು ಭಾಗ, ಕೈಕಾಡು ಪಾರಾಣೆ, ಕಿಂದಾಡು ಪಾರಾಣೆ, ಕೊಟ್ಲು ಸಂಪಾಜೆ, ಕುದ್ರೆಪಾಯ, ತಿತಿಮತಿ ಮರಪಾಲ, ಪೆರಾಜೆ, ನಂಜರಾಯಪಟ್ಟಣ ಬೆಳ್ಳಿ ಕಾಲೋನಿ, ಪೈಸಾರಿ, ಕಕ್ಕಬೆ ತಾಮರ, ಸಂಪಾಜೆ ಹೆಲ್ತ್ ಕ್ವಾಟರ್ಸ್, ಸಣ್ಣಪುಲಿಕೋಟು, ತಲಕಾವೇರಿ, ತಣ್ಣಿಮಾನಿ ಜನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

6 ನಿಯಂತ್ರಿತ ವಲಯ : ಎಂ.ಜಿ.ನಗರ, ಪೊನ್ನಂಪೇಟೆ, ವಿರಾಜ‌ಪೇಟೆ ,ಮುನೀಶ್ವರ ದೇವಸ್ಥಾನದ ಸಮೀಪ ಸುದರ್ಶನ್ ಬಡಾವಣೆ ಮಡಿಕೇರಿ, ಪೋಸ್ಟಲ್ ಕ್ವಾರ್ಟರ್ಸ್ ಮಡಿಕೇರಿ, ರಾಘವೇಂದ್ರ ದೇವಸ್ಥಾನದ ಹತ್ತಿರ, ಮನ್ಸ್ ಕಾಂಪೌಂಡ್ ರಸ್ತೆ, ಮಡಿಕೇರಿ,ಸೋಮವಾರಪೇಟೆ ತಾಲ್ಲೂಕಿನ ಅಬುರ್ಕಟ್ಟೆ.

ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 311ಕ್ಕೆ ಏರಿಕೆಯಾಗಿದ್ದು, ಈ ಪೈಕಿ 212 ಮಂದಿ ಗುಣಮುಖರಾಗಿದ್ದರೆ, 5 ಮಂದಿ ಸಾವಿಗೀಡಾಗಿದ್ದಾರೆ. ಪ್ರಸಕ್ತ 94 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ನಿಯಂತ್ರಿತ ಪ್ರದೇಶಗಳು 100ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.