ಕೊರೋನಾ ಬಗ್ಗೆ ಕೋಡಿಶ್ರೀ ಭವಿಷ್ಯ

23/07/2020

ಹಾಸನ ಜು.23: ಕೊರೊನಾದಿಂದಾಗಿ ಜಾಗತಿಕ ಮಟ್ಟದಲ್ಲಿ ರಾಜರಿಗೆ ರಾಜೀಕ ಭೀತಿ ಉಂಟಾಗಲಿದ್ದು, ರಾಜರಿಗೆ ತೊಂದರೆ, ನೋವು ಕಾಯಿಲೆ, ಅಪಮಾನ, ರಾಜಭೀತಿ ಉಂಟಾಗಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.
ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ, ಕೋಡಿಮಠದಲ್ಲಿ ಮಾತನಾಡಿದ ಶಿವಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ, ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ರಾಜಭೀತಿ ಉಂಟಾಗಲಿದೆ. ಬರುವ ದಿನಗಳು ಹೆಚ್ಚು ಅಗೋಚರವಾಗಲಿದೆ ಭೂಮಿ ನಡುಗಲಿದೆ, ವಿಪರೀತ ಮಳೆಯಾಗಲಿದೆ ಎಂದು ಹೇಳಿದ್ದಾರೆ. ಈ ಕೊರೊನಾ ದೊಡ್ಡದೊಡ್ಡ ಜನರನ್ನು ಅಧಿಕಾರಸ್ತರನ್ನು ಮತ್ತು ಮಂತ್ರಿಗಳನ್ನು ಬಲಿ ತೆಗೆದುಕೊಳ್ಳಲಿದೆ. ಕೊರೊನಾನಾದಿಂದ ರಾಜರು ಮಾಡುವ ಶಾಸನಗಳು ಪ್ರಜೆಗಳ ವಿರೋಧಿಯಾಗಲಿದೆ. ದಟ್ಟವಾದ ಮೋಡ ಕವಿದು ಕತ್ತಲಾಗಲಿದೆ ಈ ಮಧ್ಯೆ ಒಂದು ಮಿಂಚು ಬಂದು ಮೋಡ ದೂರ ಸರಿಸಲಿದೆ. ಕಾರ್ಮೋಡವಾಗಿ ಬಂದಿರುವ ಈ ಕೊರೊನಾ ಮುಂದೆ ಒಳ್ಳೆಯ ಚಿಂತನೆ ಕೊಡಲಿದೆ. ಎರಡು ಮೂರು ತಿಂಗಳಲ್ಲಿ ಕೊರೊನಾ ಕಡಿಮೆಯಾಗಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.