ಹೊಸ ಮಾರ್ಗಸೂಚಿ ಬಿಡುಗಡೆ

23/07/2020

ಬೆಂಗಳೂರು ಜು.23 : ಕೊರೊನಾ ನಿಯಂತ್ರಣಕ್ಕಾಗಿ ಒಂದು ವಾರ ಬೆಂಗಳೂರು, ಗ್ರಾಮಾಂತರ ಜಿಲ್ಲೆಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ಅವಧಿ ಮುಕ್ತಾಯವಾಗಿದೆ. ಲಾಕ್‍ಡೌನ್ ತೆರವಾಗಿದೆ ಎಂದು ಜನರ ಮುಕ್ತ ಸಂಚಾರಕ್ಕೆ ಸರ್ಕಾರ ಅವಕಾಶ ಕೊಟ್ಟಿಲ್ಲ. ಬದಲಾಗಿ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿ ರಾತ್ರಿ ಕಫ್ರ್ಯೂ, ಭಾನುವಾರ ಲಾಕ್‍ಡೌನ್ ಮುಂದುರೆಸುವ ಮೂಲಕ ನಿರ್ಬಂಧ ಹೇರಿದೆ.
ಪ್ರತಿದಿನ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಪ್ರ್ಯೂ ಜಾರಿಗೊಳಿಸಲಾಗಿದೆ. ಅಂತೆಯೇ ಭಾನುವಾರ ಲಾಕ್ ಡೌನ್ ಜಾರಿಗೊಳಿಸಿ ಆದೇಶಿಸಿದ್ದಾರೆ. ಅಂತೆಯೇ ಜನಸಂದಣಿಯನ್ನು ತಡೆಯುವ ನಿಟ್ಟಿನಲ್ಲಿ ತರಕಾರಿ ಮಾರುಕಟ್ಟೆ, ಬೆಂಗಳೂರು ಅಲ್ಲದೆ ಜಿಲ್ಲೆ, ತಾಲೂಕು ಮಟ್ಟದಲ್ಲಿ ಎಪಿಎಂಸಿ ಅಥವಾ ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ. ಉದ್ಯಾನವನಗಳಲ್ಲಿ ಜಿಮ್, ಸಲಕರಣೆಗಳು ಮತ್ತು ಕುಳಿತುಕೊಳ್ಳಲು ಬೆಂಚ್ ಗಳನ್ನು ಬಳಸುವುದನ್ನು ನಿಷೇಧಿಸಿ ಅದೇಶ ಹೊರಡಿಸಿದ್ದಾರೆ.