ಅಮೆರಿಕ-ಚೀನಾ ನಡುವೆ ಶೀತಲ ಸಮರ

23/07/2020

ಹೂಸ್ಟನ್ ಜು. 23 : ಹೂಸ್ಟನ್ ನಲ್ಲಿರುವ ಚೀನಾದ ದೂತವಾಸ ಕಚೇರಿ ತೆರವುಗೊಳಿಸಲು ಅಮೆರಿಕ ಚೀನಾಗೆ ಸೂಚನೆ ನೀಡಿದ್ದು, ಅಮೆರಿಕ-ಚೀನಾ ನಡುವಿನ ಶೀತಲ ಸಮರ ಮತ್ತೊಂದು ಹಂತ ತಲುಪಿದೆ.
ಹೂಸ್ಟನ್ ನಲ್ಲಿರುವ ಚೀನಾದ ದೂತವಾಸ ಕಚೇರಿಯಿಂದ ಅಮೆರಿಕನ್ನರ ಬೌದ್ಧಿಕ ಆಸ್ತಿ ಹಕ್ಕು ಹಾಗೂ ಗೌಪ್ಯತೆಗೆ ಅಪಾಯವಿದ್ದು, ಅದನ್ನು ರಕ್ಷಿಸುವುದಕ್ಕಾಗಿ ಚೀನಾ ದೂತವಾಸ ಕಚೇರಿಯನ್ನು ಸ್ಥಗಿತಗೊಳಿಸುವುದಕ್ಕೆ ಆದೇಶ ನೀಡಲಾಗಿದೆ ಎಂದು ಅಮೆರಿಕ ಸರ್ಕಾರ ಸಮರ್ಥನೆ ನೀಡಿದೆ.
ಚೀನಾದ ವಿದೇಶಾಂಗ ವಕ್ತಾರರಾದ ವಾಂಗ್ ವೆನ್ಬಿನ್ ಅಮೆರಿಕದ ಈ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಮೆರಿಕದ ಬೇಡಿಕೆ ಹಿಂದೆಂದೂ ಕಾಣದ ತೀವ್ರತರವಾದುದ್ದಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಅಮೆರಿಕಾದಲ್ಲಿರುವ ಚೀನಾ ರಾಯಭಾರ ಕಚೇರಿ ಹಾಗೂ ದೂತವಾಸ ಕಚೇರಿಗಳಿಗೆ ಇತ್ತೀಚೆಗಷ್ಟೇ ಬಾಂಬ್ ಹಾಗೂ ಜೀವ ಬೆದರಿಕೆಗಳೂ ಬಂದಿದ್ದವು ಎಂದು ಹೇಳಿದ್ದಾರೆ.