ಪತ್ರಕರ್ತ ವಿಕ್ರಮ್ ಜೋಶಿ ಸಾವು

ನವದೆಹಲಿ ಜು.23 : ಘಾಜಿಯಾಬಾದ್ ಮೂಲದ ಪತ್ರಕರ್ತ ವಿಕ್ರಮ್ ಜೋಶಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಆಡಳಿತಾರೂಢ ಉತ್ತರಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರವಾಗಿ ಕಿಡಿಕಾರಿದ್ದು, ಉತ್ತರಪ್ರದೇಶ ಸರ್ಕಾರವನ್ನು ಗೂಂಡಾ ರಾಜ್ಯವೆಂದು ಕಿಡಿಕಾರಿದ್ದಾರೆ.
ಪತ್ರಕರ್ತನ ಸಾವು ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಪತ್ರಕರ್ತನ ಕೊಲೆ ಮತ್ತು ಸಂಬಂಧಿಯ ಮೇಲಿನ ಹಲ್ಲೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಅಲ್ಲದೆ ಯೋಗಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು ರಾಮರಾಜ್ಯದ ಮಾತುಕೊಟ್ಟಿದ್ದ ಬಿಜೆಪಿ ಸರ್ಕಾರ ಗೂಂಡಾ ರಾಜ್ಯವನ್ನು ನಿರ್ಮಾಣ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇವಿಚಾರವಾಗಿ ಟ್ವೀಟ್ ಮಾಡಿರುವ ರಂದೀಪ್ ಸುರ್ಜೇವಾಲಾ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭರವಸೆ ನೀಡಿದ್ದ ಅದೇ ರಾಮ ರಾಜ್ಯವೇ? ಇದು ಸಂಪೂರ್ಣ ‘ಗೂಂಡರಾಜ್’. ಯುಪಿಯಲ್ಲಿ ಪತ್ರಕರ್ತರಾಗಲೀ, ಕಾನೂನನ್ನು ರಕ್ಷಿಸುವವರಾಗಲೀ ಸುರಕ್ಷಿತವಲ್ಲ, ಇವರಿಂದ ಸಾಮಾನ್ಯ ಜನರು ನ್ಯಾಯವನ್ನು ಹೇಗೆ ನಿರೀಕ್ಷಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.
