ತಾಲಿಬಾನ್ ಉಗ್ರರನ್ನು ಕೊಂದ ಬಾಲಕಿ

23/07/2020

ಕಾಬೂಲ್ ಜು.23 : ತನ್ನ ಹೆತ್ತವರನ್ನು ಕಣ್ಣೆದುರೇ ಮನೆಯಿಂದ ಎಳೆದೊಯ್ದು ಕೊಲೆ ಮಾಡಿದ ಇಬ್ಬರು ತಾಲಿಬಾನ್ ಉಗ್ರರನ್ನು 15 ವರ್ಷ ಪ್ರಾಯದ ಖಮರ್ ಗುಲ್ ಎಂಬ ಬಾಲಕಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಘೋರ್‍ಪ್ರಾಂತ್ಯದಲ್ಲಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಪ್ರಾಂತ್ಯದ ತೈವಾರಾ ಜಿಲ್ಲೆಯಲ್ಲಿ ತನ್ನ ಸಹೋದರ ಮತ್ತು ತಂದೆ-ತಾಯಿಯನ್ನು ನನ್ನ ಕಣ್ಣೆದುರೇ ತಾಲಿಬಾನಿಗಳು ಹತ್ಯೆ ಮಾಡಿದ್ದರು. ಇದಕ್ಕೆ ಸೇಡು ತೀರಿಸಿಕೊಂಡಿದ್ದೇನೆ ಎಂದು ಖಮರ್ ಗುಲ್ ಹೇಳಿದ್ದಾಳೆ ಎಂದು ಟೋಲೊ ನ್ಯೂಸ್ ವರದಿ ಮಾಡಿದೆ.
ಖಮರ್ ಗುಲ್ ತನ್ನ ತಂದೆಯ ಎಕೆ -47 ರೈಫಲ್ ತೆಗೆದುಕೊಂಡು ತನ್ನ ಹೆತ್ತವರನ್ನು ಗುಂಡಿಕ್ಕಿ ಕೊಂದ ಇಬ್ಬರು ತಾಲಿಬಾನಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾಳೆ.