ಕೊಡವ ಬುಡಕಟ್ಟು ಜನರನ್ನು ಶಾಸನಬದ್ಧವಾಗಿ ರಕ್ಷಿಸಲು ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಲು ಸಿಎನ್‍ಸಿ ಆಗ್ರಹ

23/07/2020

ಮಡಿಕೇರಿ ಜು. 23 : ಸೂಕ್ಷ್ಮ ಅಲ್ಪಸಂಖ್ಯಾತ ದೇಶಭಕ್ತ ಕೊಡವ ಬುಡಕಟ್ಟು ಜನರನ್ನು ಶಾಸನಬದ್ಧವಾಗಿ ರಕ್ಷಿಸಲು ಎಸ್ಟಿ ಟ್ಯಾಗ್ ಮತ್ತು ಬುಡಕಟ್ಟು ಜನರನ್ನು ಶಾಸನಬದ್ಧವಾಗಿ ರಕ್ಷಿಸಲು ಎಸ್ಟಿ ಟ್ಯಾಗ್ ಮತ್ತು ಜಿಯೋ-ಪೊಲಿಟಿಕಲ್ ಸ್ವಾಯತ್ತತೆಯ ಆಕಾಂಕ್ಷೆಯನ್ನು ಪಿಎಂ ಮತ್ತು ಸಿಎಂ ಬಹಿರಂಗವಾಗಿ ಬೆಂಬಲಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ( ಸಿಎನ್‍ಸಿ) ಮನವಿ ಮಾಡಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ) ಅಧ್ಯಕ್ಷ ಎನ್.ಯು.ನಾಚಪ್ಪ, ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಪಕ್ಷವೇ ಆಡಳಿತ ನೆಡೆಸುತ್ತಿರುವಾಗಲೂ. ದೇಶದ್ರೋಹಿ ಎಡ ಉದಾರವಾದಿಗಳು ಮತ್ತು ಮೂಲಭೂತ ಜಿಹಾದಿ ಘಟಕಗಳು ಜಂಟಿಯಾಗಿ, ಕೊಡಗನ್ನು ಕೆಂಪು, ಹಸಿರು ಕಾರಿಡಾರ್ ಆಗಿ ಪರಿವರ್ತಿಸಲು (ಮಾವೋವಾದ ಮತ್ತು ಗಾಜ್ವಾ- ಇ-ಹಿಂದ್) ಈ ಪ್ರದೇಶದಲ್ಲಿ ರಹಸ್ಯವಾಗಿ ಸಕ್ರಿಯವಾಗಿದೆ ಮತ್ತು ಕೊಡವ ಬುಡಕಟ್ಟಿನ ಅಧಿಕೃತ ಹಕ್ಕುಪತ್ರ ದಾಖಲಾತಿಯಿಲ್ಲದ ನಮ್ಮ ಪೂವಾರ್ಜಿತ ಆಸ್ತಿಗಳನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಅವರ ಈ ಹಾದಿಯಲ್ಲಿ ಒಂದೇ ಅಡಚಣೆ ಎಂದರೆ ಅದು ದೇಶಭಕ್ತಿಯ ಸ್ಥಳೀಯ ಕೊಡವ ಬುಡಕಟ್ಟು ಜನಾಂಗದವರು ಮಾತ್ರ. ಆದ್ದರಿಂದ ಅವರು ಕೊಡವ ಅಸ್ತಿತ್ವವನ್ನು ಕಾನೂನುಬಾಹಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಮತ್ತು ನಿಷ್ಪಕ್ಷಪಾತ ಮತ್ತು ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಕೊಡವ ಬುಡಕಟ್ಟು ಶಾಸನಬದ್ಧ ಖಾತರಿಯ ಮೂಲಕ ಅಧಿಕಾರವನ್ನು ನೀಡಬೇಕು ಎಂದು ಆಗ್ರಹಿಸಿರು.
ಎಸ್ಟಿ ಟ್ಯಾಗ್ ಮಾತ್ರ ನಮ್ಮ ಭೂಮಿ, ಸಂಸ್ಕೃತಿ-ಜಾನಪದ ಪರಂಪರೆಯನ್ನು ರಕ್ಷಿಸುತ್ತದೆ ಮತ್ತು ನಮ್ಮ ಕೊಡವ ಬುಡಕಟ್ಟು ಅನುವಂಶಿಕತೆಯ ಊರ್ಜಿತ್ವ ಮತ್ತು ಪೂರ್ವಜತೆಯನ್ನು ದೃಢಪಡಿಸುತ್ತದೆ. ಆದ್ದರಿಂದ ಪ್ರಧಾನಿ ಮೋದಿ ಮತ್ತು ಸಿಎಂ ಯಡಿಯೂರಪ್ಪ ಅವರು ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದರು.