ಅಯೋಧ್ಯೆಯತ್ತ ಪಯಣಿಸಿದ ಶ್ರೀ ಕಾವೇರಿಯ ಪವಿತ್ರ ಜಲ – ಮೃತ್ತಿಕೆ

23/07/2020

ಮಡಿಕೇರಿ ಜು. 23 : ಶ್ರೀರಾಮನ ಜನ್ಮಸ್ಥಾನವಾದ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮನ ಭವ್ಯ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕೊಡಗಿನ ಕುಲದೇವತೆ ಕಾವೇರಿಯ ಪವಿತ್ರ ತೀರ್ಥ ಮತ್ತು ಕ್ಷೇತ್ರದ ಮಣ್ಣನ್ನು ಸಂಗ್ರಹಿಸಿ(ಮೃತ್ತಿಕೆ) ವಿಶೇಷ ಪೂಜೆ ನೆರವೇರಿಸಿ ಕಳುಹಿಸಿಕೊಡಲಾಯಿತು.

ಮುಂದಿನ ಆಗಸ್ಟ್ 5 ರಂದು ಉದ್ದೇಶಿತ ಶ್ರೀರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಅಯೋಧ್ಯೆಯಲ್ಲಿ ನೆರವೇರಲಿದೆ. ಈ ಹಿನ್ನೆಲೆ ರಾಷ್ಟ್ರ ಮತ್ತು ವಿಶ್ವದಾದ್ಯಂತದ ಪುನ್ಯ ಸ್ಥಳಗಳ ಮೃತ್ತಿಕೆಯನ್ನು ಸಂಗ್ರಹಿಸಿ ಅಯೋಧ್ಯೆಗೆ ಕಳುಹಿಸಿಕೊಡುವ ಕಾರ್ಯ ನಡೆಯುತ್ತಿದೆ.

ಉದ್ದೇಶಿತ ಭವ್ಯ ಮಂದಿರದ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕಳುಹಿಸಿಕೊಡುವ ಮೃತ್ತಿಕೆ ಮತ್ತು ಪವಿತ್ರ ತೀರ್ಥಕ್ಕೆ ಗುರುವಾರ ಕೊಡಗು ಜಿಲ್ಲಾ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆಯಿಂದ ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಪೂಜಾ ಕಾರ್ಯಕ್ರಮದ ಸಂದರ್ಭ ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ಹಿಂದೂ ಪರ ಸಮಘಟನೆಗಳ ಪ್ರಮುಖರಾದ ನಾರಾಯಣ ಆಚಾರ್, ಚಿ.ನಾ. ಸೋಮೇಶ್ ಸೇರಿದಂತೆ ಹಲ ಪ್ರಮುಖರು ಹಾಜರಿದ್ದರು.