ಆಲೂರು-ಸಿದ್ದಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಂಪ್ಯೂಟರ್ ವಿತರಣೆ

23/07/2020

ಮಡಿಕೇರಿ ಜು.23 : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ಆಲೂರು-ಸಿದ್ದಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 1 ಕಂಪ್ಯೂಟರ್ ಮತ್ತು 1 ನೋಟು ಎಣಿಸುವ ಯಂತ್ರವನ್ನು ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೊಡಂದೇರ ಪಿ.ಗಣಪತಿ ಅವರು ಗುರುವಾರ ವಿತರಿಸಿದರು.
ಈ ಹಿಂದೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಆಲೂರು-ಸಿದ್ಧಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಂಪ್ಯೂಟರ್ ಸೇರಿದಂತೆ ಇನ್ನಿತರ ವಸ್ತುಗಳು ಸುಟ್ಟು ನಷ್ಟವುಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸಮ್ಮುಖದಲ್ಲಿ ಕಂಪ್ಯೂಟರ್ ಮತ್ತು ನೋಟು ಎಣಿಸುವ ಯಂತ್ರವನ್ನು ಕೊಡಗುಗೆಯಾಗಿ ನೀಡಲಾಗಿದೆ.
ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಡಿಸಿಸಿ ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲೀಂ, ಆಲೂರು-ಸಿದ್ದಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಪಿ.ಎಸ್ ಲೀಲಾ ಕುಮಾರ್, ನಿರ್ದೇಶಕರಾದ ಸಿ.ಕೆ ದೇವಯ್ಯ, ಎಂ.ಸಿ.ಕಾವೇರಪ್ಪ ಇತರರು ಇದ್ದರು.