ಬೆಂಗಳೂರು- ಜಾಲ್ಸೂರು ಹೆದ್ದಾರಿ ಕಿ.ಮೀ. 240 ರಿಂದ 241 ರವರೆಗೆ ಸಂಚಾರ ಬಂದ್

July 23, 2020

ಮಡಿಕೇರಿ ಜು.23 : ಮಳೆಹಾನಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಉದ್ದೇಶದಿಂದ ಬೆಂಗಳೂರು- ಜಾಲ್ಸೂರು ರಾಜ್ಯ ಹೆದ್ದಾರಿಯ ಕಿ.ಮೀ. 240 ರಿಂದ 241 ರವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಜು.21 ರಿಂದ ಸೆ.6 ರವರೆಗೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರು ಬದಲಿ ಮಾರ್ಗವಾದ ಸೋಮವಾರಪೇಟೆಯ ಜೂನಿಯರ್ ಕಾಲೇಜು, ಚೌಡ್ಲು-ಶಾಂತಳ್ಳಿ ಮಾರ್ಗವಾಗಿ ಸಂಚರಿಸಬಹುದಾಗಿದೆ.

error: Content is protected !!