ಅಂಗಡಿಯಲ್ಲಿರುವವರಿಗೆ ಸೋಂಕಿದ್ದರೆ 14 ದಿನ ಅಂಗಡಿ ಬಂದ್

23/07/2020

ಮಡಿಕೇರಿ ಜು.23 : ಅಂಗಡಿ ಮಳಿಗೆಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸೋಂಕು ದೃಢಪಟ್ಟಿದ್ದಲ್ಲಿ ಅಥವಾ ಅವರು ಸೋಂಕಿತರ ಪ್ರಾಥಮಿಕ ಸಂಪರ್ಕಗಳಾಗಿದ್ದ ಪಕ್ಷದಲ್ಲಿ ಮಳಿಗೆ ನಡೆಸಲು ಪರ್ಯಾಯ ಸಿಬ್ಬಂದಿಗಳ ಲಭ್ಯತೆ ಇರದಿದ್ದಲ್ಲಿ ಸದರಿ ಮಳಿಗೆಯನ್ನು ನಿಯಮಾನುಸಾರ 14 ದಿನಗಳ ಕಾಲ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಗೃಹ ಸಂಪರ್ಕ ತಡೆಯಲ್ಲಿರುವವರÀ ಮಾದರಿ ಪರೀಕ್ಷೆಯನ್ನು 10 ನೇ ದಿನ ನಡೆಸಲಾಗುವುದು. ವರದಿ ಬರುವವರೆಗೆ ಗೃಹ ಸಂಪರ್ಕ ತಡೆಯಲ್ಲಿರಬೇಕಾಗುತ್ತದೆ ಎಂದರು.