ಕೊಡಗಿನ ಕೋವಿಡ್ ಪಾಸಿಟಿವ್ ಸಿಇಟಿ ವಿದ್ಯಾರ್ಥಿಗಳು ಈ ವಿಳಾಸಕ್ಕೆ ಮಾಹಿತಿ ನೀಡಿ

23/07/2020

ಮಡಿಕೇರಿ ಜು.23 : ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳು ಕೂಡ ಸಿಇಟಿ ಪರೀಕ್ಷೆಯನ್ನು ಬರೆಯುವ ಅವಕಾಶವನ್ನು ಶಿಕ್ಷಣ ಇಲಾಖೆ ಕಲ್ಪಿಸಿದೆ. ವಿದ್ಯಾರ್ಥಿಗಳ ಮಾಹಿತಿಯನ್ನು ಮುಂಚಿತವಾಗಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ಒದಗಿಸಬೇಕಿದೆ.
ಇ ಮೇಲ್ ವಿಳಾಸ ddpue.madikeri@gmail.com ಗೆ ಸಲ್ಲಿಸುವುದು ಹಾಗೂ ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9448794809 ಗೆ ಸಂಬಂಧಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರುಗಳು ಮಾಹಿತಿ ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.