ಗಡಿ ಬಂದ್ ಮಾಡಿದ ಕೇರಳ ಸರ್ಕಾರ

24/07/2020


ತಿರುವನಂತಪುರಂ ಜು.23 : ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಅನಗತ್ಯ ಪ್ರಯಾಣ ನಿರ್ಬಂಧಿಸುವುದಕ್ಕಾಗಿ ಕೇರಳ ಸರ್ಕಾರ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದ ನಂತರ ಕೇರಳ-ತಮಿಳುನಾಡು ಮತ್ತು ಕೇರಳ-ಕರ್ನಾಟಕ ಗಡಿಗಳನ್ನು ಬಂದ್ ಮಾಡಲಾಗಿದ್ದು, ತುರ್ತು ಅಗತ್ಯಗಳಿಗೆ ಮಾತ್ರ ಗಡಿ ಪ್ರವೇಶಿಸಲು ಅವಕಾಶ ನೀಡಲಾಗಿದೆ.
ವೈದ್ಯಕೀಯ ತುರ್ತುಸ್ಥಿತಿ ಮತ್ತು ಅನಿವಾರ್ಯ ಸಾಮಾಜಿಕ ಸಂದರ್ಭಗಳನ್ನು ಹೊಂದಿರುವ ಜನರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಹೇಳಿದ್ದಾರೆ.