ಪರೀಕ್ಷೆಯಲ್ಲಿ ಶೇ.75 ಅಂಕಗಳ ಅಗತ್ಯವಿಲ್ಲ

July 24, 2020

ನವದೆಹಲಿ ಜು.24 : ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎನ್ ಐಟಿ ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ತಾಂತ್ರಿಕ ಸಂಸ್ಥೆಗಳಲ್ಲಿನ ಪ್ರವೇಶ ಮಾನದಂಡದಲ್ಲಿ ಸಡಿಲಿಕೆ ಮಾಡಲಾಗಿದ್ದು, 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಠ ಶೇ.75 ರಷ್ಟು ಅಂಕಗಳ ಅಗತ್ಯತೆ ಇರಬೇಕಾಗಿಲ್ಲ.
ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಎನ್ ಐಟಿಗಳು ಮತ್ತು ಇತರ ಕೇಂದ್ರಿಯ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಪ್ರವೇಶ ಮಾನದಂಡಗಳಲ್ಲಿ ಸಡಿಲಿಕೆ ಮಾಡಲು ಕೇಂದ್ರೀಯ ಸೀಟು ಹಂಚಿಕೆ ಮಂಡಳಿ (ಸಿಎಸ್‍ಎಬಿ) ನಿರ್ಧರಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಟ್ವಿಟ್ ಮಾಡಿದ್ದಾರೆ.

error: Content is protected !!