ಮಹಿಳಾ ಸೇನಾಧಿಕಾರಿಗಳಿಗೆ ಆಯೋಗ

24/07/2020

ನವದೆಹಲಿ ಜು.24 : ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಗುರುವಾರ ಭಾರತೀಯ ಸೇನೆ ತಿಳಿಸಿದೆ.
ಸರ್ಕಾರದ ಈ ಆದೇಶವು ಸೈನ್ಯದಲ್ಲಿ ಮಹಿಳೆಯರಿಗೆ ದೊಡ್ಡ ಹುದ್ದೆಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡುವ ಮೂಲಕ ಮಹಿಳಾ ಸಬಲೀಕರಣಗೊಳಿಸಲು ದಾರಿ ಮಾಡಿಕೊಟ್ಟಿದೆ ಎಂದು ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಅವರು ಹೇಳಿದ್ದಾರೆ.
ಭಾರತೀಯ ಸೇನೆಯ ಎಲ್ಲಾ 10 ವಿಭಾಗಗಳ ಶಾರ್ಟ್ ಸರ್ವಿಸ್ ಕಮಿಷನ್ಡ್(ಎಸ್‍ಎಸ್‍ಸಿ) ಮಹಿಳಾ ಅಧಿಕಾರಿಗಳ ಶಾಶ್ವತ ಆಯೋಗಕ್ಕೆ ಅನುದಾನ ನಿರ್ದಿಷ್ಟಪಡಿಸುವಂತೆ ಕೇಂದ್ರ ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೂ ಕಮಾಂಡರ್ ಸ್ಥಾನ ಕೊಡಬೇಕು. ಅವರಿಗೆ ಶಾಶ್ವತ ಆಯೋಗ ಸ್ಥಾಪಿಸಬೇಕು. ಲಿಂಗ ತಾರತಮ್ಯ ಹೋಗಲಾಡಿಸಬೇಕು. ಕೇಂದ್ರ ಸರ್ಕಾರವು ತನ್ನ ಮಾನಸಿಕ ಸ್ಥಿತಿಯನ್ನು ಬಲಾವಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ ಕೇಂದ್ರ ಈಗ ಆಯೋಗ ಸ್ಥಾಪನೆಗೆ ಆದೇಶ ಹೊರಡಸಿದೆ.