ಬ್ರಾಹ್ಮಣ ಮಂಡಳಿಗೆ ರಾಘವೇಂದ್ರ ಭಟ್ ನೇಮಕ

24/07/2020

ಬೆಂಗಳೂರು ಜು.24 : ವೇದ ಬ್ರಹ್ಮ ವಿದ್ವಾನ್ ಡಾ.ರಾಘವೇಂದ್ರ ಭಟ್ ಅವರನ್ನು ಕರ್ನಾಟಕ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ನಿರ್ದೇಶಕರು ಮತ್ತು ವಿಶೇಷ ಆಹ್ವಾನಿತರನ್ನಾಗಿ ಸರ್ಕಾರ ನೇಮಿಸಿದೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿರುವ ಡಾ. ರಾಘವೇಂದ್ರ ಭಟ್, ಸಂಸ್ಕೃತ ವೇದ ಪಾಠ ಶಾಲೆ ಮುನ್ನಡೆಸುತ್ತಿದ್ದಾರೆ. ಸಂಸ್ಕೃತ ಮತ್ತು ವೇದಾಧ್ಯಯನದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅವರು, ಹಲವಾರು ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.