ಕಾಮಾಲೆಗೆ ನೆಲನೆಲ್ಲಿ ಅತ್ಯುತ್ತಮ ಔಷಧಿ

24/07/2020

ಭಾರತದೆಲ್ಲೆಡೆ ಕಂಡುಬರುವ ನೆಲನೆಲ್ಲಿಯನ್ನು ಕಿರುನೆಲ್ಲಿಯೆಂದೂ ಕರೆಯಲಾಗುತ್ತದೆ. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಳದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಇದು ಬೆಳೆದು ೫ರಿಂದ ೮ ತಿಂಗಳು ಅಯಸ್ಸು ಪಡೆದು ಜನಸಾಮನ್ಯನ ಕಾಯಿಲೆಗೆ ಔಷಧಿಯಾಗಿ ಉಪಯುಕ್ತವಾಗಿದೆ.

ಸರಳ ಚಿಕಿತ್ಸೆಗಳು
ತಲೆ ಸುತ್ತು ನಿವಾರಣೆಗೆ : ನೆಲ್ಲಿಕಾಯಿ ಚೂರ್ಣ ಮತ್ತು ಕೊತ್ತಂಬರಿ ಸಮ ತೂಕ ರಾತ್ರಿ ನೀರಿನಲ್ಲಿ ನೆನೆ ಹಾಕುವುದು. ಬೆಳಗ್ಗೆ ಚೆನ್ನಾಗಿ ಕಿವುಚಿ ಶೋಧಿಸಿ, ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು.

ನಿದ್ರೆ ಬಾರದಿರುವಿಕೆಗೆ : ಅಜೀರ್ಣವಾಗಿದ್ದರೆ ತಕ್ಕ ಉಪಚಾರ ಮಾಡುವುದು. ಒಂದು ಟೀ ಚಮಚ ನೆಲ್ಲಿಕಾಯಿ ರಸ ಅರ್ಧ ನೆಲ್ಲಿಚೆಟ್ಟಿನ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಸೇವಿಸುವುದು ಮತ್ತು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಸುವಿನ ಹಾಲನ್ನು ಕುಡಿಯುವುದು.

ಮೂತ್ರದಲ್ಲಿ ಉರಿ ಮತ್ತು ಮೂತ್ರದ ತಡೆಯ ನಿವಾರಣೆಗೆ : ದಪ್ಪವಾಗಿರುವ ೫-೬ ಹಸೀ ನೆಲ್ಲಿಕಾಯಿಗಳನ್ನು ತಂದು ಬೀಜಗಳನ್ನು ಬೇರ್ಪಡಿಸಿ ಸ್ವಲ್ಪ ಬೆಚ್ಚಗೆ ಮಾಡಿ, ರಸವನ್ನು ಹಿಂಡಿಕೊಳ್ಳುವುದು. ನಂತರ ರಸವನ್ನು ಬಟ್ಟೆಯಲ್ಲಿ ಸೋಸಿ, ಕಬ್ಬಿನ ಹಾಲಿನಲ್ಲಿ ಹಾಕಿ ಕುಡಿಯುವುದು.

ಅಸಾಧ್ಯ ಹೊಟ್ಟೆನೋವು ನಿವಾರಣೆಗೆ : ಬೀಜಗಳನ್ನು ಬೇರ್ಪಡಿಸಿದ ಹಸಿ ನೆಲ್ಲಿಕಾಯಿಗಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಕಿಬ್ಬೊಟ್ಟೆ ಮತ್ತು ಹೊಕ್ಕಳ ಸುತ್ತ ಲೇಪಿಸುವುದು. ನೆಲ್ಲಿಕಾಯಿ ರಸವನ್ನು ಸಕ್ಕರೆ ಸೇರಿಸಿ ಕುಡಿಯುವುದು.

ಮಧುಮೇಹದ ನಿವಾರಣೆಗೆ : ನೆಲ್ಲಿ ಚೆಟ್ಟು ಮತ್ತು ನೇರಳೆ ಬೀಜಗಳನ್ನು ಸಮವಾಗಿ ಸೇರಿಸಿ ಕುಟ್ಟಿ ನುಣುಪಾದ ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು. ದಿವಸಕ್ಕೆ ಎರಡು ವೇಳೆ.

ಉಪಯೋಗಗಳು :

ಕಾಮಾಲೆಗೆ ನೆಲನೆಲ್ಲಿ ಅತ್ಯುತ್ತಮ ಔಷಧಿ. ಸಿದ್ಧ ವೈದ್ಯ ಪದ್ಧತಿಯಲ್ಲಿ ನೆಲನೆಲ್ಲಿಯನ್ನು ದಶಕಗಳ ಕಾಲದಿಂದಲೂ ಔಷಧಿಯಾಗಿ ಬಳಸಲಾಗುತ್ತದೆ.ಯುನಾನಿ ವೈದ್ಯಪದ್ಧತಿಯಲ್ಲಿ ಗಾಯ, ಕಜ್ಜಿ ಮತ್ತು ಜಂತುಹುಳುಗಳ ನಿವಾರಣೆಗೆ ನೆಲನೆಲ್ಲಿಯನ್ನು ಬಳಸಲಾಗುತ್ತದೆ.
ಭೇದಿಯಾಗುತ್ತಿದ್ದಲ್ಲಿ ನೆಲನೆಲ್ಲಿಯ ಎಳೆಯ ಕಾಂಡವನ್ನು ಜಜ್ಜಿ ರಸ ತೆಗೆದು ನಾಲ್ಕು ಗಂಟೆಗಳಿಗೊಂದು ಬಾರಿ ಕುಡಿಯಬೇಕು ಇಲ್ಲವೇ ಹಾಗೆಯೇ ತಿನ್ನಬಹುದು.
ಗಾಯಗಳಾಗೆದ್ದಲ್ಲಿ ಈ ಗಿಡವನ್ನು ಬೇರು ಸಹಿತ ಜಜ್ಜಿ ಲೇಪಿಸಬೇಕು.
ಚರ್ಮರೋಗಗಳಲ್ಲಿ ನೆಲನೆಲ್ಲಿಯ ಎಲೆಗಳನ್ನು ಉಪ್ಪಿನೊಂದಿಗೆ ಅರೆದು ಲೇಪಿಸುವುದರಿಂದನವೆ ಕಡಿಮೆಯಾಗುತ್ತದೆ.
ನೆಲನೆಲ್ಲಿಯು ಕುಷ್ಠ, ಆಸ್ತಮಾ, ಬಿಕ್ಕಳಿಕೆ ನಿವಾರಣೆಯಲ್ಲಿಯೂ ಉಪಯುಕ್ತ ಔಷಧಿಯಾಗಿದೆ.
ಹೊಟ್ಟೆನೋವು: ಅಜೀರ್ಣದಿಂದ ಹೊಟ್ಟೆನೋವು ಉಂಟಾಗಿದ್ದಲ್ಲಿ ನೆಲನೆಲ್ಲಿ ಸೊಪ್ಪಿನ ಕಷಾಯ ತಯಾರಿಸಿ ಅದಕ್ಕೆ ತುಪ್ಪದಲ್ಲಿ ಹರಿದ ಹಿಂಗಿನ ಪುಡಿಯನ್ನು ಒಂದು ಚಿಟಿಕೆ ಬೆರೆಸಿ ಕುಡಿಯಬೇಕು.
ಅತಿರಕ್ತಸ್ರಾವ: ಮಾಸಿಕಸ್ರಾವದ ಸಮಯದಲ್ಲಿ ಅತಿರಕ್ತಸ್ರಾವವಾಗುತ್ತಿದ್ದಲ್ಲಿ ನೆಲನೆಲ್ಲಿಯ ಚಟ್ನಿಯನ್ನು ಆಹಾರದಲ್ಲಿ ಸೇವಿಸುವುದಲ್ಲದೇ ನೆಲನೆಲ್ಲಿ ಕಷಾಯ ತಯಾರಿಸಿ ದಿನಕ್ಕೆ ಮೂರು ಬಾರಿ ಕುಡಿಯಬೇಕು.
ರೋಗನಿರೋಧಕ ಶಕ್ತಿ: ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.ಕಾಲರ,ಚಿಕುನ್ಯಾ,ಡೆಂಗೆ ಮುಂತಾದ ಕಾಯಿಲೆಗಳು ಹರಡಿದ್ದ ಸಮಯದಲ್ಲಿ ಆರೋಗ್ಯವಂತರು ನೆಲನೆಲ್ಲಿಯ ಕಷಾಯ ಇಲ್ಲವೇ ರಸ ಕುಡಿಯುವುದರಿಂದ ಕಾಯಿಲೆ ಕಾಂಡದಂತೆ ತಡೆಯಬಹುದು.