ಕ್ರಿಸ್ಪೀ ಫ್ರೈಡ್ ಚಿಕನ್ ಲೆಗ್ ಮಾಡುವ ವಿಧಾನ

24/07/2020

ಬೇಕಾಗುವ ಸಾಮಾಗ್ರಿಗಳು : ಚಿಕನ್ ಲೆಗ್ – 8, ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ, ಹಸಿ ಮೆಣಸಿನಕಾಯಿ – 4, ಕರಿ ಮೆಣಸಿನ ಪುಡಿ – 2 ಚಮಚ, ನಿಂಬೆ ರಸ -2 ಚಮಚ, ಮೈದಾ 1 – ಕಪ್, ಕೋಳಿ ಮೊಟ್ಟೆಯ (ಎರಡು ಮೊಟ್ಟೆಯದು), ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ ಸೊಪ್ಪು, ನೀರು ಅರ್ಧ ಕಪ್, ಬ್ರೆಡ್ ಚೂರುಗಳು 1 ಕಪ್, ಎಣ್ಣೆ 3 ಕಪ್ , ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ: ಚಿಕನ್ ಲೆಗ್ ಪೀಸ್ ಅನ್ನು ತೊಳೆದು ಅದರ ಮೇಲೆ ನೈಫ್ ನಿಂದ ಗೆರೆಗಳನ್ನು ಎಳೆಯಿರಿ (ಈ ರೀತಿ ಮಾಡಿದರೆ ಚಿಕನ್ ಮಸಾಲೆಯನ್ನು ಚೆನ್ನಾಗಿ ಹೀರಿಕೊಳ್ಳುವುದು), ನಂತರ ಚಿಕನ್ ಲೆಗ್ ಪೀಸ್ ಮೇಲೆ ಉಪ್ಪು ಸವರಿ. ಈಗ ಚಿಕನ್ ಹಾಕಿರುವ ಬಟ್ಟಲಿಗೆ ನಿಂಬೆ ರಸ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜಜ್ಜಿದ ಹಸಿ ಮೆಣಸಿನ ಕಾಯಿ, ಕರಿ ಮೆಣಸಿನ ಪುಡಿ, ಕೊತ್ತಂಬರಿ ಮತ್ತು ಪುದೀನಾ ಸೊಪ್ಪಿನ ಪೇಸ್ಟ್ ಹಾಕಿ ಮಿಕ್ಸ್ ಮಾಡಿ 1 ಗಂಟೆ ಇಡಿ. ನಂತರ ಮೈದಾ ಹಿಟ್ಟಿಗೆ 2 ಮೊಟ್ಟೆಯ ಬಿಳಿ ಹಾಕಿ, ಅದಕ್ಕೆ ಜಜ್ಜಿದ ಹಸಿ ಮೆಣಸಿಕಾಯಿ, ಸ್ವಲ್ಪ ಕರಿ ಮೆಣಸಿನ ಪುಡಿ ಮತ್ತು ಸ್ವಲ್ಪ ಬಿಸಿ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ, ಚಿಕನ್ ಲೆಗ್ ಪೀಸ್ ಅನ್ನು ಮೈದಾ ಹಿಟ್ಟಿನಲ್ಲಿ ಅದ್ದಿ, ಬ್ರೆಡ್ ಚೂರಿನಲ್ಲಿ ಹೊರಳಾಡಿಸಿ ಎಣ್ಣೆಗೆ ಹಾಕಿ ಡೀಪ್ ಫ್ರೈ ಮಾಡಿ. ಚಿಕನ್ ಬೆಂದು ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆದರೆ ಕ್ರಿಸ್ಪೀ ಫ್ರೈಡ್ ಚಿಕನ್ ಲೆಗ್ಸ್ ರೆಡಿ.