ಕೊಡಗಿನ ಪ್ರಮುಖ ಪ್ರವಾಸಿ ತಾಣಗಲ್ಲೊಂದಾದ ದುಬಾರೆ ಆನೆ ಶಿಬಿರ

24/07/2020

ದುಬಾರೆ ಕಾಡು ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರದಿಂದ ಒಂದು ಪ್ರವಾಸಿ ತಾಣ. ಕಾವೇರಿ ಈ ಕಾಡಿನ ಮೂಲಕ ಹರಿಯುತ್ತಾಳೆ. ದುಬಾರೆ ಕಾಡಿನಲ್ಲಿ ಆನೆ ಶಿಬಿರ ಇದೆ. ಇಲ್ಲಿ ಮದವೇರಿದ ಆನೆಗಳನ್ನು ಹಿಡಿದು ಪಳಗಿಸುತ್ತಾರೆ.

ಈ ಶಿಬಿರದಲ್ಲಿ ಆನೆಗಳ ತರಬೇತಿ,ಘಾಗೂ ಪ್ರವಾಸಿಗಳಿಗೆ ಆನೆ ಸವಾರಿ ಮೊದಲಾದ ಚಟುವಟಿಕೆಗಳು ನಡೆಯುತ್ತವೆ. ಪ್ರತಿ ದಿನ ಬೆಳಿಗ್ಗೆ 8 ರಿಂದ 5.30 ರ ವರೆಗೆ ಪ್ರವಾಸಿಗಳಿಗೆ ಈ ಶಿಬಿರ ತೆರೆದಿರುತ್ತದೆ. ಈ ಸಮಯದ ನಂತರ ಆನೆಗಳನ್ನು ಕಾಡಿನಲ್ಲಿ ಬಿಟ್ಟು ಬರಲಾಗುತ್ತದೆ. ರಾತ್ರಿಯಿಡಿ ಕಾಡಿನಲ್ಲಿಯೇ ಇರುವ ಆನೆಗಳನ್ನು ಮತ್ತೆ ಮುಂಜಾನೆ ಮತ್ತು ಸಾಯಂಕಾಲ ಶಿಬಿರಕ್ಕೆ ಕರೆತರಲಾಗುತ್ತದೆ.