ಕೊಡಗಿನಲ್ಲಿ ಸೋಂಕಿತರ ಸಂಖ್ಯೆ 323ಕ್ಕೆ ಏರಿಕೆ

24/07/2020

ಮಡಿಕೇರಿ ಜು. 24 : ಜಿಲ್ಲೆಯಲ್ಲಿ ಶುಕ್ರವಾರ ಮದ್ಯಾಹ್ನದ ವೇಳೆಗೆ 9 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನ ಎಮ್ಮೆಮಾಡುವಿನ ಮಂಗಳೂರು ಪ್ರಯಾಣದ ಇತಿಹಾಸ ಹೊಂದಿರುವ 68 ಮತ್ತು 39 ವರ್ಷದ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ.
ಮಡಿಕೇರಿಯ ಪೋಸ್ಟಲ್ ಕ್ವಾರ್ಟರ್ಸ್ ನ ಈ ಹಿಂದೆ ಸೋಂಕು ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 46 ಮತ್ತು 18 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.
ಸೋಮವಾರಪೇಟೆಯ ಸುಂಟಿಕೊಪ್ಪದ ಬಿ.ಎಂ ರಸ್ತೆಯ ಮಯೂರ ಕಾಂಪ್ಲೆಕ್ಸ್ ನ 36 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ.
ಕುಶಾಲನಗರ ಹುಲುಸೆಯಲ್ಲಿ ಈ ಹಿಂದೆ ಸೋಂಕು ದೃಢಪಟ್ಟಿದ್ದ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ 65 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ವೀರಾಜಪೇಟೆಯ ಸಿದ್ದಾಪುರದ 42 ವರ್ಷದ ಪುರುಷನಲ್ಲಿಯೂ ಸೋಂಕು ದೃಢಪಟ್ಟಿದೆ.
ಈ ಹಿಂದೆ ಸೋಂಕು ದೃಢಪಟ್ಟ ಪೋಸ್ಟಲ್ ಕ್ವಾರ್ಟರ್ಸ್ ನ ವ್ಯಕ್ತಿಯ ಪ್ರಾಥಮಿಕ ಸಂಪರ್ಕವಾದ ಮಡಿಕೇರಿಯ ಓಂಕಾರೇಶ್ವರ ರಸ್ತೆಯ 36 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಮಡಿಕೇರಿಯ ಮಹದೇವಪೇಟೆಯ 29 ವರ್ಷದ ಗರ್ಭಿಣಿ ಮಹಿಳೆಗೂ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಹೊಸದಾಗಿ 5 ಕಂಟೈನ್ ಮೆಂಟ್ ವಲಯಗಳನ್ನು ತೆರೆಯಲಾಗಿದೆ. ಮಯೂರ ಕಾಂಪ್ಲೆಕ್ಸ್, ಬಿ.ಎಂ ರಸ್ತೆ ಸುಂಟಿಕೊಪ್ಪ, ಸೋಮವಾರಪೇಟೆ, ಮಸೀದಿ ಹತ್ತಿರ, ಎಮ್ಮೆಮಾಡು, ನಾಪೋಕ್ಲು, ಮಾರುಕಟ್ಟೆ, ಸಿದ್ದಾಪುರ, ವೀರಾಜಪೇಟೆ, ಜಿ.ಟಿ ಶಾಲೆ ಹಿಂಭಾಗ, ಓಂಕಾರೇಶ್ವರ ದೇವಾಲಯ ರಸ್ತೆ, ಮಡಿಕೇರಿ ಮತ್ತು ಭರತ್ ಬ್ಯಾಂಗಲ್ಸ್ ಸಮೀಪ ಮಹದೇವಪೇಟೆ ಮಡಿಕೇರಿಯಲ್ಲಿ ಹೊಸ ಕಂಟೈನ್ ಮೆಂಟ್ ವಲಯಗಳನ್ನು ತೆರೆಯಲಾಗಿದೆ.