ಸುಂಟಿಕೊಪ್ಪದ ಮಯೂರ ಕಾಂಪ್ಲೆಕ್ಸ್ ಸೀಲ್‍ಡೌನ್

24/07/2020

ಸುಂಟಿಕೊಪ್ಪ,ಜು.24: ಸುಂಟಿಕೊಪ್ಪದಲ್ಲಿ ಮತ್ತೊಬ್ಬ ವ್ಯಕ್ತಿಗೆ ಕರೋನಾ ಸೊಂಕು ಪ್ರಕರಣ ಪತ್ತೆಯಾಗಿದ್ದು ಈ ಸಂಬಂಧ ಚಿಕಿತ್ಸಾಲಯ, ಪ್ರಯೋಗಾಲಯ ಹಾಗೂ ವಾಣಿಜ್ಯ ಮಳಿಗೆಗಳಿಗೆ ಸಿಲ್‍ಡೌನ್ ಮಾಡಲಾಗಿದೆ.
ಸುಂಟಿಕೊಪ್ಪ 2ನೇ ವಿಭಾಗದ ರಾಷ್ಟ್ರೀಯ ಹೆದಾರಿ ಬದಿಯ ಮಯೂರ ಕಾಂಪ್ಲೆಕ್ಸ್‍ನ ಕಟ್ಟಡ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಮದ್ಯಮ ವಯಸ್ಕನೋರ್ವನಿಗೆ ಕರೋನಾ ಪಾಸಿಟಿವ್ ಕಂಡು ಬಂದಿದೆ ಗ್ರಾ.ಪಂ.ಪಿಡಿಓ ವೇಣುಗೋಪಾಲ್, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಜೀವನ್, ಸಹಾಯಕ ಚಂದ್ರೇಶ್, ಕಂದಾಯ ಪರಿವೀಕ್ಷಕರಾದ ಶಿವಪ್ಪ ಗ್ರಾಮಲೆಕ್ಕಿಗರಾದ ನಂದೀಶ್ ಇವರುಗಳು ಕಾಂಪ್ಲೆಸ್ ತೆರಳಿ ಸಿಲ್‍ಡೌನ್‍ಗೊಳಿಸಿ ಸ್ಯಾನಿಟೈಸರ್‍ಗೊಳಿಸಿ ಮಯೂರ ಕಾಂಪ್ಲೆಕ್ಸ್ 50 ಮೀಟರ್ ವ್ಯಾಪ್ತಿಯಲ್ಲಿ ಒಳಗಿನ ಪ್ರದೇಶವನ್ನು ಸಿಲ್‍ಡೌನ್‍ಗೊಳಿಸಲಾಗಿದೆ.