ಕೊಡಗರಹಳ್ಳಿ ಗ್ರಾ. ಪಂ. ಯಿಂದ ಎಂ.ಎನ್. ಮನು ನಂಜಪ್ಪಗೆ ಸನ್ಮಾನ

July 24, 2020

ಸುಂಟಿಕೊಪ್ಪ,ಜು.24: ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡು ಕಳೆದ 5ವರ್ಷದಿಂದ ಸಮರ್ಥವಾಗಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಂ.ಎನ್. ಮನು ನಂಜಪ್ಪ ಅವರಿಗೆ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ವತಿಯಿಂದ ಶಾಲು ಹೊದೆಸಿ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಕಾರ್ಯದರ್ಶಿ ಸುಕುಮಾರ್, ಸಿಬ್ಬಂದಿಗಳಾದ ಧನಂಜಯ, ಅಣ್ಣಪ್ಪ ಮತ್ತಿತರರು ಇದ್ದರು.