ಸೋಮವಾರಪೇಟೆಯಲ್ಲಿ ಬೀಡಾಡಿ ದನಗಳ ಹಾವಳಿ

25/07/2020

ಮಡಿಕೇರಿ ಜು. 25 : ಸೋಮವಾರಪೇಟೆ ಪಟ್ಟಣದಲ್ಲಿ ಬೀಡಾಡಿ ದನಗಳ ಹಾವಳಿ ಮಿತಿ ಮೀರಿದ್ದು, ವಾಹನ ಚಾಲಕರು ಮತ್ತು ಸಾರ್ವಜನಿಕರು ಪರದಾಡುವಂತ್ತಾಗಿದೆ.
ಹಗಲು ರಾತ್ರಿ ಪಟ್ಟಣದಲ್ಲೇ ಇರುವ ದನಗಳು, ಖಾಸಗಿ ಬಸ್ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ, ಮಾರುಕಟ್ಟೆ ಆವರಣದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಜಾನುವಾರುಗಳ ಕಾದಾಟದ ಸಂದರ್ಭ ವಾಹನಗಳಿಗೂ ಹಾನಿಯಾಗಿದೆ. ಪಟ್ಟಣದ ಮುಖ್ಯ ರಸ್ತೆ, ಬಸವೇಶ್ವರ ರಸ್ತೆ, ರೇಂಜರ್ಸ್ ಬ್ಲಾಕ್, ಎಂ.ಡಿ.ಬ್ಲಾಕ್, ಜನತಾ ಕಾಲೋನಿಗಳಲ್ಲಿ ಬೀಡಾಡಿ ಹಸುಗಳ ಹಾವಳಿ ಹೆಚ್ಚಾಗಿದೆ.