ಸ್ವದೇಶಿ ನಿರ್ಮಿತ “ಕೋವಾಕ್ಸಿನ್” ಪ್ರಯೋಗ

25/07/2020

ನವದೆಹಲಿ ಜು.25 : ಕೋವಿಡ್-19 ನಿಯಂತ್ರಣದ ಪ್ರಯತ್ನವಾಗಿ ಸ್ವದೇಶಿ ನಿರ್ಮಿತ “ಕೋವಾಕ್ಸಿನ್” ಔಷಧಿಯನ್ನು 30 ವರ್ಷದ ಯುವಕನೋರ್ವನಿಗೆ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್ ) ಇಂದು ನೀಡಿದೆ.
ಹೈದ್ರಾಬಾದ್ ಮೂಲದ ಭಾರತ್ ಬಯೋ ಟೆಕ್ ಔಷಧ ಕಂಪನಿ ಸಿದ್ಧಪಡಿಸಿರುವ ‘ಕೋವಾಕ್ಸಿನ್’ ಮಾನವ ಪ್ರಯೋಗಕ್ಕೆ ಏಮ್ಸ್ ನ ನೈತಿಕ ಕಮಿಟಿ ಅನುಮೋದನೆ ನೀಡಿದ ಬಳಿಕ ಇದು ಮಾನವ ಪ್ರಯೋಗದ ಮೊದಲ ಹಂತವಾಗಿದೆ.
ದೆಹಲಿಯ ನಿವಾಸಿಯೊಬ್ಬರಿಗೆ ಇಂದು ಕೋವಾಕ್ಸಿನ್ ಔಷಧಿಯನ್ನು ನೀಡಲಾಗಿದೆ ಎಂದು ಅಧ್ಯಯನದ ತನಿಖಾಧಿಕಾರಿ ಹಾಗೂ ಕಮ್ಯೂನಿಟಿ ಮೆಡಿಷನ್ ಡಿಪಾರ್ಟ್ ಮೆಂಟ್ ನಲ್ಲಿ ಕೆಲಸ ಮಾಡಿರುವ ಪ್ರೊಫೆಸರ್ ಡಾ. ಸಂಜಯ್ ರೈ ತಿಳಿಸಿದ್ದಾರೆ.
ದೆಹಲಿಯ 30 ವರ್ಷದ ಯುವಕನಿಗೆ ಕೋವಾಕ್ಸಿನ್ ಔಷಧಿಯನ್ನು ಮೊದಲಿಗೆ ನೀಡಲಾಗಿದೆ.ಎರಡು ದಿನಗಳ ಹಿಂದೆ ಆತನನ್ನು ತಪಾಸಣೆ ಮಾಡಲಾಗಿತ್ತು. ಆರೋಗ್ಯದ ಪ್ರಮುಖ ನಿಯತಾಂಕಗಳು ಸಾಮಾನ್ಯವಾಗಿದ್ದವು. ಆತನಿಗೆ ಯಾವುದೇ ರೀತಿಯ ಅಸ್ವಸ್ಥತತೆ ಕಂಡು ಬರಲಿಲ್ಲ ಎಂದು ಡಾ. ರೈ ಹೇಳಿದ್ದಾರೆ.