ಸಿದ್ದು ಬಿಜೆಪಿ ಸರ್ಕಾರದ ಸಿಎಂ ಅಲ್ಲ

July 25, 2020

ಬೆಂಗಳೂರು ಜು.25 : ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಅಲ್ಲ, ಅವರು ವಿಪಕ್ಷ ನಾಯಕರು. ಅವರು ಇನ್ನೂ ಮುಖ್ಯಮಂತ್ರಿ ಎನ್ನುವ ಗುಂಗಿನಲ್ಲಿ ಇದ್ದಾರೆ. ಅವರು ನಮಗೆ ಆದೇಶ ಮಾಡಲು ಬರುವುದಿಲ್ಲ. ಅವರ ಪಕ್ಷದಲ್ಲಿರುವವರಿಗೆ ಆದೇಶ ಮಾಡುವ ಅಧಿಕಾರ ಸಿದ್ದರಾಮಯ್ಯ ಅವರಿಗೆ ಇಲ್ಲ. ತನಿಖೆ ಮಾಡಿ ಅಂತ ಅವರು ಹೇಗೆ ಆದೇಶ ಮಾಡುತ್ತಾರೆ ಎಂದು ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷದವರ ಬುರುಡೆ ಆಪಾದನೆಗೆ ನಿನ್ನೆ ಐದು ಜನ ಸಚಿವರು ಉತ್ತರ ಕೊಟ್ಟಿದ್ದೇವೆ. ನಮ್ಮ ಉತ್ತರಕ್ಕೆ ಅವರ ಜವಾಬು ನೀಡುವುದಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಖರೀದಿಸಲಾದ ವೆಂಟಿಲೇಟರ್ ಬಗ್ಗೆ ಆಗಲೇ ಪ್ರಶ್ನೆ ಮಾಡಿಲಿಲ್ಲವೇಕೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಪ್ರಶ್ನೆ ಮಾಡಲು ನಾನು ಅವರ ಪಕ್ಷದಲ್ಲಿ ಇಲ್ಲ. ಅವರು ಹೇಳಿದಂತೆಲ್ಲಾ ಕೇಳುವುದಕ್ಕೆ ಹೇಳುವದಕ್ಕೆ ಅವರು ಯಾರು ಎಂದು ಪ್ರಶ್ನಿಸಿದ್ದಾರೆ.