ಸೆ.19 ರಿಂದ ಐಪಿಎಲ್ ಟೂರ್ನಿ ಆರಂಭ

July 25, 2020

ನವದೆಹಲಿ ಜು.25 : ಬಹು ನಿರೀಕ್ಷಿತ 2020ರ ಐಪಿಎಲ್ ಟೂರ್ನಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ ಎಂದು ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಘೋಷಿಸಿದ್ದಾರೆ.
ಟೂರ್ನಿಯ ಕುರಿತ ಅಂತಿಮ ವಿವರಗಳನ್ನು ಹಾಗೂ ವೇಳಾಪಟ್ಟಿಯನ್ನು ಅನುಮೋದಿಸಲು ಮುಂದಿನ ವಾರ ಆಡಳಿತ ಮಂಡಳಿ ಸಭೆ ನಡೆಸಲಾಗುತ್ತದೆ. ಬಿಸಿಸಿಐ ಟೂರ್ನಿ ಯೋಜನೆಯ ಬಗ್ಗೆ ಅನೌಪಚಾರಿಕವಾಗಿ ಈಗಾಗಲೇ ಐಪಿಎಲ್ ಫ್ರಾಂಚೈಸಿಗಳಿಗೆ ತಿಳಿಸಿದೆ. ಶೀಘ್ರವೇ ಆಡಳಿತ ಸಮಿತಿ ಸಭೆ ಕರೆದು ವೇಳಾಪಟ್ಟಿಯನ್ನು ಫೈನಲ್ ಮಾಡಲಾಗುವುದು. ಟೂರ್ನಿ ಸೆ.19 ರಿಂದ ನ.8ರ ವರೆಗೂ ನಡೆಯಲಿದೆ. ಸರ್ಕಾರ ಅನುಮತಿಯನ್ನು ನಿರೀಕ್ಷೆ ಮಾಡುತ್ತಿದ್ದೇವೆ. 60 ಪಂದ್ಯ, 51 ದಿನ ಯಾವುದೇ ಪಂದ್ಯಗಳ ಖಡಿತವಿಲ್ಲದೇ ಸಂಪೂರ್ಣ ಟೂರ್ನಿ ನಡೆಯಲಿದೆ ಎಂದು ಬ್ರಿಜೇಶ್ ಪಟೇಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

error: Content is protected !!