ಜಿಲ್ಲೆಯಲ್ಲಿ ಹೊಸದಾಗಿ 3 ಕೋವಿಡ್ ಪ್ರಕರಣಗಳು ಪತ್ತೆ : ಸೋಂಕಿತರ ಸಂಖ್ಯೆ 326ಕ್ಕೆ ಏರಿಕೆ

July 25, 2020

ಮಡಿಕೇರಿ ಜು.25 : ಕೊಡಗು ಜಿಲ್ಲೆಯಲ್ಲಿ 3 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 326ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಡಿಕೇರಿ ತಾಲ್ಲೂಕಿನ ಕಟ್ಟೆಮಾಡಿನ ಪರಂಬು ಪೈಸಾರಿಯ 45 ವರ್ಷದ ಮಹಿಳೆ, ನಾಪೋಕ್ಲುವಿನ ಎಮ್ಮೆಮಾಡು ಗ್ರಾಮದ 50 ವರ್ಷದ ಪುರುಷ ಸೇರಿದಂತೆ ಬೇತು ಗ್ರಾಮದ 29 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 3 ಹೊಸ ಕಂಟೈನ್‍ಮೆಂಟ್ ವಲಯಗಳನ್ನು ಹೊಸದಾಗಿ ತೆರೆಯಲಾಗಿದೆ. ಎಮ್ಮೆಮಾಡಿನ ಪರಂಬು ಪೈಸಾರಿ, ಕೂರ್ಲಿಮಂಡಲ, ನಾಪೋಕ್ಲಿನ ಬೇತು ರಸ್ತೆಯಲ್ಲಿರುವ ಪಿಎಂಎಸ್ ಸಂಕೀರ್ಣ

ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 326ಕ್ಕೆ ಏರಿಕೆಯಾಗಿದ್ದು, ಈ ಪೈಕಿ 246 ಮಂದಿ ಗುಣಮುಖರಾಗಿದ್ದಾರೆ. ಐದು ಮಂದಿ ಸಾವಿಗೀಡಾಗಿದ್ದು, 75ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 100 ಕಂಟೈನ್‍ಮೆಂಟ್ ವಲಯಗಳಿದೆ ಎಂದು ತಿಳಿಸಿದ್ದಾರೆ.