ಎಸ್‌ಕೆಎಸ್‌ಎಸ್‌ಎಫ್, ಜಿಸಿಸಿ ಕೊಡಗು ಸಮಿತಿಯ ನೂತನ ಉಪಾಧ್ಯಕ್ಷರಾಗಿ ಅಬ್ದುಲ್ ರಜಾಕ್ ಬಜೆಗುಂಡಿ ಆಯ್ಕೆ

July 25, 2020

ಮಡಿಕೇರಿ ಜು. 25 : ವಿದೇಶದಲ್ಲಿ ಅನಿವಾಸಿ ಕನ್ನಡಿಗರ ಆಶಾಕಿರಣವಾಗಿ‌ ಕಾರ್ಯನಿರ್ವಹಿಸುತ್ತಿರುವ ಎಸ್.ಕೆ.ಎಸ್.ಎಸ್.ಎಫ್ ,ಜಿಸಿಸಿ ಕೊಡಗು ‌ಘಟಕದ ನೂತನ ‌ಉಪಾಧ್ಯಕ್ಷರಾಗಿ ಅಬ್ದುಲ್ ‌ರಜಾಕ್ ಬಜೆಗುಂಡಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಕಾರ್ಯಕಾರಿ ಸಮಿತಿಯ ಸಭೆಯು, ಆನ್ ಲೈನ್ ಮೂಲಕ ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಅಧ್ಯಕ್ಷರಾದ ಹುಸೈನ್ ಫೈಜಿ ರವರ ನೇತೃತ್ವದಲ್ಲಿ ನಡೆಯಿತು.

ಎಸ್.ಕೆ.ಎಸ್.ಎಸ್.ಎಫ್, ಜಿಸಿಸಿ‌ ಕೊಡಗು ಸಮಿತಿಯ ನೂತನ ಉಪಾಧ್ಯಕ್ಷರಾಗಿ, ಅಬ್ದುಲ್ ರಜಾಕ್ ಬಜೆಗುಂಡಿ ಅಬುಧಾಬಿರವರನ್ನು ಆಡಳಿತ ಸಮಿತಿಯ ಸರ್ವ ಸದಸ್ಯರ ಒಮ್ಮತ್ತದ ತೀರ್ಮಾನದಿಂದ ಆಯ್ಕೆ ಮಾಡಲಾಯಿತು.
ಹಲವಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಅಬ್ದುಲ್ ರಜಾಕ್ ರವರು ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಬಜೆಗುಂಡಿ ಗ್ರಾಮದ ನಿವಾಸಿಯಾಗಿದ್ದಾರೆ.
ಪ್ರಸ್ತುತ ಅಬುಧಾಬಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಎಸ್.ಕೆ.ಎಸ್.ಎಸ್.ಎಫ್, ಜಿಸಿಸಿ ಕೊಡಗು ಆಡಳಿತ ಮಂಡಳಿಯ ಆನ್ ಲೈನ್ ಸಭೆಯಲ್ಲಿ ಸೌದಿ ಅರೇಬಿಯಾ, ಬಹರೈನ್, ಒಮಾನ್, ಯುನೈಟೆಡ್ ಅರಬ್ ಎಮರೇಟ್ಸ್ ಮುಂತಾದ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

error: Content is protected !!