ಶನಿವಾರಸಂತೆ ಗುಂಡೂರಾವ್ ಬಡವಾಣೆಯ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ

25/07/2020

ಮಡಿಕೇರಿ ಜು. 25 : ಶನಿವಾರಸಂತೆ ಹೋಬಳಿಯ ಗುಂಡೂರಾವ್ ಬಡವಾಣೆಯಲ್ಲಿ ಕೊರೊನಾ ಸೋಂಕು ಧೃಡಪಟ್ಟ ಹಿನ್ನೆಲೆ ಬಡಾವಣೆಯನ್ನು‌ ಸೀಲ್ ಡೌನ್ ಮಾಡಲಾಗಿತ್ತು. ಇದರಿಂದ ಬಡಾವಣೆಯ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದರು.
ಇದನ್ನು ಮನಗಂಡು ಬದ್ರಿಯಾ ಗಲ್ಫ್ ಅಸೋಸಿಯೇಷನ್ ಶನಿವಾರಸಂತೆ ಅನಿವಾಸಿ ಯುವಕರ ತಂಡ ಬಡಾವಣೆ ನಿವಾಸಿಗಳು ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರದಿದ್ದಾರೆ.
ಬಡಾವಣೆಯ ನಿವಾಸಿಗಳಿಗೆ ದಿನನಿತ್ಯ ಬಳಕೆಗೆ ಬೇಕಾದ ಆಹಾರ ಪದಾರ್ಥಗಳನ್ನು ವಿತರಿಸಿದ್ದಾರೆ.

ಈ‌ ಸಂದರ್ಭ ಮಾತನಾಡಿದ ಗ್ರಾಮದ ಹಿರಿಯ ಮುಖಂಡ ಶೇಕಬ್ಬಾ ಹಾಜಿ, ಶನಿವಾರಸಂತೆಯ ಬದ್ರಿಯಾ ಗಲ್ಫ್ ಅಸೋಸಿಯೇಷನ್ , ಅನಿವಾಸಿ ಯುವಕರ‌ ತಂಡದೊಂದಿಗೆ ಗ್ರಾಮದ ಜನರ ಸಂಕಷ್ಟದ ಬಗ್ಗೆ ಹೇಳಿದಾಕ್ಷಣ,ಸ್ಪಂದಿಸಿ ಬಡಾವಣೆಯ ನಿವಾಸಿಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ್ದಾರೆ ಎಂದು ಶೇಕಬ್ಬಾ ಹಾಜಿ ಕಿಟ್ ವಿತರಣೆ ಸಂದರ್ಭ ಹೇಳಿದರು.
ಈ ಸಂದರ್ಭ ಹಸೈನಾರ್ ಉಸ್ತಾದ್ ಹಾಗೂ ಇನ್ನಿತರರು ಇದ್ದರು.