ಜಿಲ್ಲೆಯ ವಿವಿಧೆಡೆ ಶ್ರದ್ಧಾಭಕ್ತಿಯಿಂದ ಜರುಗಿದ ನಾಗರ ಪಂಚಮಿ

July 25, 2020

ಮಡಿಕೇರಿ ಜು.25 : ಕೊಡಗು ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಸರಳ ರೀತಿಯಲ್ಲಿ ನಾಗರಪಂಚಮಿ ಆಚರಿಸಲಾಯಿತು. ಮಡಿಕೇರಿ ನಗರದ ಅಶ್ವತ್ಥ ಕಟ್ಟೆಯಲ್ಲಿ ನಾಗನ ಕಲ್ಲಿಗೆ ಮುಂಜಾನೆ ಅಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಿತು. ಕೂಡಿಗೆ ಉದ್ಭವ ಸುಬ್ರಮಣ್ಯ ದೇವಾಲಯದಲ್ಲಿ ಕೂಡ ನಾಗರಪಂಚಮಿಯನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ವಿವಿಧ ದೇವಾಲಯ ಆಡಳಿತ ಮಂಡಳಿಗಳು ಹೆಚ್ಚಿನ ಭಕ್ತರು ಸೇರದಂತೆ ಕ್ರಮ ಕೈಗೊಂಡಿದ್ದವು.

error: Content is protected !!