ಆರೋಗ್ಯಕರವಾದ ರವೆ ವಾಂಗೀಬಾತ್ ಮಾಡುವ ವಿಧಾನ

25/07/2020

ಅಕ್ಕಿಗೆ ಹೋಲಿಸಿದರೆ ರವೆ ಕಡಿಮೆ ಕ್ಯಾಲೋರಿ ಹೊಂದಿದೆ. ರವೆಯಿಂದ ವಾಂಗೀಬಾತ್ ಮಾಡಿದರೆ ತಿನ್ನಲು ತುಂಬಾ ರುಚಿ ಮತ್ತು ಆರೋಗ್ಯಕ್ಕೆ ಒಳ್ಳೆಯದು. 

ಬೇಕಾಗುವ ಸಾಮಾಗ್ರಿಗಳು:  ಸಣ್ಣ ರವೆ – 1 ಕಪ್, ದೊಡ್ಡ ರವೆ 1/2 ಕಪ್, ಬದನೆಕಾಯಿ 2, ಹಸಿಮೆಣಸಿನ ಕಾಯಿ 4, ಕರಿಬೇವಿನ ಎಲೆ, ಸಾಸಿವೆ 1 ಚಮಚ, ಗೋಡಂಬಿ 10-15, ವಾಂಗೀಬಾತ್  ಪುಡಿ 3-4 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು 2 ಚಮಚ ಎಣ್ಣೆ
ತುರಿದ ತೆಂಗಿನ ಕಾಯಿ

ತಯಾರಿಸುವ ವಿಧಾನ:  ಬಾಣಲೆಯಲ್ಲಿ ಸಣ್ಣ ರವೆ ಮತ್ತು ದಪ್ಪ ರವೆ ಎರಡನ್ನೂ ಪ್ರತ್ಯೇಕವಾಗಿ ಹುರಿದು ಒಂದು ಪಾತ್ರೆಯಲ್ಲಿ ಹಾಕಿಡಬೇಕು. ಬೇರೊಂದು ಪಾತ್ರೆಯಲ್ಲಿ ನೀರು ಹಾಕಿ ನೀರನ್ನು ಚೆನ್ನಾಗಿ ಕುದಿಯಲು ಇಡಬೇಕು. ಬದನೆಕಾಯಿಯನ್ನು ತೊಳೆದು ಕತ್ತರಿಸಿ ಒಂದು ಬದಿಯಲ್ಲಿ ಇಡಬೇಕು.  ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಸಾಸಿವೆಯನ್ನು ಹಾಕಬೇಕು, ಸಾಸಿವೆ ಚಟಾಪಟ ಶಬ್ದ ಬರುವಾಗ ಗೋಡಂಬಿ, ಹಸಿಮೆಣಸಿನ ಕಾಯಿ, ಕರಿಬೇವಿನ ಎಲೆ ಹಾಕಿ 2-3 ನಿಮಿಷ ಹುರಿದು ನಂತರ ಬದನೆಕಾಯಿ, ರುಚಿಗೆ ತಕ್ಕ ಉಪ್ಪು ಹಾಕಿ 10 ನಿಮಿಷದ ಕಾಲ ಹುರಿಯಬೇಕು. ಈ ಮಿಶ್ರಣವನ್ನು ಆಗಾಗ ಸೌಟ್ ನಿಂದ ತಿರುಗಿಸುತ್ತಾ ಇರಬೇಕು. ಬದನೆಕಾಯಿ ಬೆಂದ ನಂತರ ಅದಕ್ಕೆ ಹುರಿದ ರವೆ, ವಾಂಗೀಬಾತ್ ಪುಡಿ ಹಾಕಿ ಅಗತ್ಯಕ್ಕೆ ತಕ್ಕ ನಿರು ಹಾಕಿ ಚೆನ್ನಾಗಿ ತಿರುಗಿಸಿ ಬೇಯಿಸಬೇಕು. ಉಪ್ಪು ಸಾಲಾದಿದ್ದರೆ ಸ್ವಲ್ಪ ಉಪ್ಪು ಸೇರಿಸಬೇಕು.5. ರವೆ ಬೆಂದ ನಂತರ ಅದಕ್ಕೆ ತುರಿದ ತೆಂಗಿನ ಕಾಯಿ ಚೆನ್ನಾಗಿ ತಿರುಗಿಸಿ 2 ನಿಮಿಷ ಕಾಲ ಬಿಸಿಮಾಡಬೇಕು. ನಂತರ ಬೆಂದ ರವೆಯನ್ನು ಉರಿಯಿಂದ ತೆಗೆದು ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರವೆ ವಾಂಗೀಬಾತ್ ರೆಡಿ.