ಚೆಟ್ಟಳಿಯ ಶ್ರೀ ಭಗವತಿ ದೇವಾಲಯದಲ್ಲಿ ನಾಗರ ಪಂಚಮಿ ಆಚರಣೆ

25/07/2020

ಮಡಿಕೇರಿ ಜು. 25 : ಶ್ರೀಮಂಗಲದ ಶ್ರೀ ಭಗವತಿ ದೇವಾಲಯದಲ್ಲಿ ನಾಗರ ಪಂಚಮಿ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಸಲ್ಲಿಸಲಾಯಿತು.

ನೂತನವಾಗಿ ಜೀರ್ಣೋದ್ಧಾರ ಗೊಂಡ ಚೆಟ್ಟಳ್ಳಿಯ ಶ್ರೀಮಂಗಲ ಶ್ರೀ ಭಗವತಿ ದೇವಾಲಯದ ಸಮೀಪ ಪ್ರತಿಷ್ಠಾಪಿಸಲಾದ ನಾಗದೇವರ ನೆಲೆಯಲ್ಲಿ ದೇವಾಲಯದ ತಕ್ಕಮುಖ್ಯಸ್ಥರಾದ ಮುಳ್ಳಂಡ ಸೂರು ಗಣಪತಿ ಹಾಗೂ ಊರಿನವರ ಸಮ್ಮುಖದಲ್ಲಿ ಕ್ಷೀರಭಿಶೇಕ, ಎಳೆನೀರಾಭಿಶೇಕ ಹಾಗೂ  ವಿಶೇಷ ಪೂಜೆಸಲ್ಲಿಸುವ ಮೂಲಕ ನಾಗಪಂಚಮಿ ಪೂಜೆ ನಡೆಯಿತು. ಭಕ್ತಾಧಿಗಳಿಗೆ ಪ್ರಸಾದ ಹಾಗೂ ಪಾಯಸ ವಿತರಿಸಲಾಯಿತು.