ಸೋಮವಾರಪೇಟೆಯಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಣೆ

25/07/2020

ಮಡಿಕೇರಿ ಜು. 25 : ಕೋವಿಡ್-19 ಸೋಂಕಿತ ಯುವತಿ ಕೆಲಸ ಮಾಡಿದ ಬ್ಯೂಟಿ ಪಾರ್ಲರ್‍ನ್ನು ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡಿದರು.
ಕಕ್ಕೆಹೊಳೆ ಸಮೀಪವಿದ್ದ ಸೋಂಕಿತ ಯುವತಿ, ಗಂಟಲು ದ್ರವ ಕೊಟ್ಟ ನಂತರವೂ ಗ್ರಂಥಾಲಯದ ಸಮೀಪದ ಪಾರ್ಲರ್‍ನಲ್ಲಿ ಕೆಲಸ ಮಾಡಿದ್ದಳು ಎನ್ನಲಾಗಿದೆ. ಸೋಂಕು ದೃಡಪಟ್ಟ ನಂತರವೂ ಮಾಲೀಕರು ಪಾರ್ಲರ್ ಮುಚ್ಚದೆ ಕಾರ್ಯನಿರ್ವಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಾರ್ಲರ್ ಮಾಲೀಕರು ವಿಷಯವನ್ನು ಮುಚ್ಚಿಟ್ಟ ಹಿನ್ನೆಲೆಯಲ್ಲಿ ಶನಿವಾರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ತೆರಳಿ ಪಾರ್ಲರ್ ಸುತ್ತಮುತ್ತ ಸ್ಯಾನಿಟೈಸ್ ಮಾಡಿಸಿ, ಪಾರ್ಲರ್‍ನ್ನು ಬಂದ್ ಮಾಡಿಸಿದ್ದಾರೆ. ಇನ್ನು ಮುಂದೆ ಪಾರ್ಲರ್‍ಗೆ ಬರುವ ಪ್ರತಿ ಗ್ರಾಹಕರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಬುಕ್‍ನಲ್ಲಿ ಬರೆದಿಡಲು ಸೂಚಿಸಿದ್ದಾರೆ.