ಜಿಲ್ಲೆಯಲ್ಲಿ 19 ಹೊಸ ಕೋವಿಡ್ ಪ್ರಕರಣ ಪತ್ತೆ

25/07/2020

ಮಡಿಕೇರಿ ಜು.25 : ಕೊಡಗು ಜಿಲ್ಲೆಯಲ್ಲಿ ಶನಿವಾರ 19 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 342ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಮಡಿಕೇರಿ ತಾಲೂಕಿನ ಕಟ್ಟೆಮಾಡುವಿನ ಪರಂಬು ಪೈಸಾರಿಯ 45 ವರ್ಷದ ಮಹಿಳೆ, ನಾಪೋಕ್ಲುವಿನ ಎಮ್ಮೆಮಾಡು ಗ್ರಾಮದ 50 ವರ್ಷದ ಪುರುಷ ಹಾಗೂ ಬೇತು ಗ್ರಾಮದ 29 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ದೊರೆತ ಮಾಹಿತಿಯ ಅನ್ವಯ ಕುಶಾಲನಗರದ ದಂಡಿನಪೇಟೆಯ 29 ವರ್ಷದ ಪುರುಷ, ಸುಂಟಿಕೊಪ್ಪದ ಒಂದನೇ ಬ್ಲಾಕ್‍ನ ಜ್ವರ ಲಕ್ಷಣವಿದ್ದ 12 ವರ್ಷದ ಬಾಲಕ, ವೀರಾಜಪೇಟೆ ಗಾಂಧಿ ನಗರದ ಜ್ವರ ಲಕ್ಷಣವಿದ್ದ 20 ವರ್ಷದ ಪುರುಷ, ವೀರಾಜಪೇಟೆ ಅರುವತ್ತೊಕ್ಲುವಿನ 18 ವರ್ಷದ ಮಹಿಳೆ, ಮಡಿಕೇರಿಯ ಹಿಲ್‍ಡೇಲ್ ರೆಸಾರ್ಟ್ ಹಿಂಭಾಗದ 46 ವರ್ಷದ ಆರೋಗ್ಯ ಕಾರ್ಯಕರ್ತ, ಬೆಂಗಳೂರು ಪ್ರಯಾಣ ಇತಿಹಾಸವಿರುವ ಕಡಗದಾಳುವಿನ 33 ವರ್ಷದ ಪುರುಷ, ಮಡಿಕೇರಿ ಕಾಲೇಜು ರಸ್ತೆಯ 40 ಹಾಗೂ 30 ವರ್ಷದ ಪುರುಷರು, ನೀರುಕೊಲ್ಲಿಯ 23 ವರ್ಷದ ಪುರುಷ, ಬೆಟ್ಟಗೇರಿಯ 51 ವರ್ಷದ ಪುರುಷ, ನಾಪೋಕ್ಲು ಬೇತುವಿನ 27 ವರ್ಷದ ಪರುಷ, ಮಡಿಕೇರಿ ಪ್ರಕೃತಿ ಲೇಔಟ್‍ನ 62 ವರ್ಷದ ಮಹಿಳೆ, ಕಾನ್ವೆಂಟ್ ರಸ್ತೆಯ 11 ವರ್ಷದ ಬಾಲಕಿ, ಮಹದೇವಪೇಟೆಯ 28 ವರ್ಷದ ಪುರುಷನಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ವಿವರಿಸಿದ್ದಾರೆ.

ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಮೂಲಕ ಗೋಣಿಕೊಪ್ಪದ ಆರೋಗ್ಯ ಇಲಾಖೆಯ 50 ವರ್ಷದ ಪುರುಷ ಹಾಗೂ ಮೈಸೂರಿನ ಸೋಂಕಿತರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಪೊನ್ನಂಪೇಟೆ ರಸ್ತೆಯ ಕಾಫಿಬೋರ್ಡ್ ಪಿಹೆಚ್‍ಎಸ್ ಕಾಲೋನಿಯ 25 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಹೊಸದಾಗಿ ಎಮ್ಮೆಮಾಡುವಿನ ಪರಂಬು ಪೈಸಾರಿ, ಕೂರ್ಲಿ ಮಂಡಲ, ನಾಪೋಕ್ಲಿನ ಬೇತು ರಸ್ತೆಯಲ್ಲಿರುವ ಪಿಎಂಎಸ್ ಸಂಕೀರ್ಣ, ವೀರಾಜಪೇಟೆಯ ಗಾಂಧಿನಗರ ಚೌಕಿ, ಮಡಿಕೇರಿಯ ಹಿಲ್‍ಡೇಲ್ ರೆಸಾರ್ಟ್ ಹಿಂಭಾಗ, ಕಡಗದಾಳು, ಸುಂಟಿಕೊಪ್ಪದ ಒಂದನೇ ಬ್ಲಾಕ್, ಗೋಣಿಕೊಪ್ಪದ ಆರೋಗ್ಯ ಇಲಾಖೆ ವಸತಿಗಗೃಹ, ಮಡಿಕೇರಿಯ ಕಾಲೇಜು ರಸ್ತೆ, ಬೆಟ್ಟಗೇರಿಯ ಅಂಚೆ ಕಚೇರಿ ಬಳಿ, ಬೇತು ಗ್ರಾಮದ ಮಕ್ಕಿ ದೇವಸ್ಥಾನದ ಬಳಿ, ಮಡಿಕೇರಿಯ ಪ್ರಕೃತಿ ಲೇಔಟ್ ಹಾಗೂ ಮಹದೇವಪೇಟೆಯ ಚೌಡೇಶ್ವರಿ ದೇವಸ್ಥಾನದ ಬಳಿಯ ಪ್ರದೇಶಗಳನ್ನು ನಿಯಂತ್ರಿತ ಪ್ರದೇಶವೆಂದು ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 342ಕ್ಕೆ ಏರಿಕೆಯಾಗಿದ್ದು, ಈ ಪೈಕಿ 249 ಮಂದಿ ಗುಣಮುಖರಾಗಿದ್ದಾರೆ. ಐದು ಮಂದಿ ಸಾವಿಗೀಡಾಗಿದ್ದು, 88 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು 110 ಕಂಟೈನ್‍ಮೆಂಟ್ ವಲಯಗಳಿವೆ ಎಂದು ಮಾಹಿತಿ ನೀಡಿದ್ದಾರೆ.