ಮಡಿಕೇರಿ ನಗರಸಭೆ ನಿರ್ಲಕ್ಷ್ಯ : ಜನರಿಂದಲೇ ರಸ್ತೆ ದುರಸ್ತಿ

26/07/2020

ಮಡಿಕೇರಿ ಜು.26 : ಪ್ರತಿದಿನ ನೂರಾರು ಜನ ಸಂಚರಿಸುವ ನಗರದ ಶ್ರೀ ಓಂಕಾರೇಶ್ವರ ದೇವಾಲಯದ ಹಿಂಬದಿಯ ರಸ್ತೆಯನ್ನು ಇಂದು ಸಾರ್ವಜನಿಕರೇ ದುರಸ್ತಿ ಪಡಿಸಿದರು. ರಸ್ತೆಯ ಹೊಂಡ ಗುಂಡಿಗಳಿಗೆ ಕಲ್ಲು ಹಾಗೂ ಮಣ್ಣನ್ನು ಹಾಕಿ ಸಮತಟ್ಟು ಮಾಡಿದರು.
ಕಳೆದ ಒಂದು ವರ್ಷದಿಂದ ರಸ್ತೆ ಹಾಳಾಗಿದ್ದರೂ ನಗರಸಭೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿತ್ತು. ಸ್ಥಳೀಯ ನಿವಾಸಿಗಳು ವಿಡಿಯೋ ದೃಶ್ಯಾವಳಿ ಸಹಿತ ಜಿಲ್ಲಾಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಸಾರ್ವಜನಿಕರು ತಾವೇ ದುರಸ್ತಿ ಕಾರ್ಯ ನಡೆಸಿದರು. ಈ ರಸ್ತೆ ಅವ್ಯವಸ್ಥೆಯಿಂದ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗಿ ಚಾಲಕರು ಅಪಾಯಕ್ಕೆ ಸಿಲುಕಿದ್ದರು.