ಅಭ್ಯತ್ ಮಂಗಲದಲ್ಲಿ ಗದ್ದೆಗಳಿಗೆ ಕಾಡಾನೆ ದಾಳಿ

26/07/2020

ಮಡಿಕೇರಿ ಜು.26 : ಅಭ್ಯತ್ ಮಂಗಲ ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಹಾವಳಿ ಆರಂಭಗೊಂಡಿದೆ. ಹಿಂಡು ಹಿಂಡಾಗಿ ದಾಳಿ ಇಟ್ಟಿರುವ ಕಾಡಾನೆಗಳು ಗ್ರಾಮದ ಗದ್ದೆಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿವೆ. ಇತ್ತೀಚೆಗಷ್ಟೇ ಭತ್ತದ ನಾಟಿ ಕಾರ್ಯ ಮುಗಿದು ಸಸಿಗಳು ಮೂಡುವ ಹಂತದಲ್ಲಿತ್ತು. ಆದರೆ ಇಂದು ಲಗ್ಗೆ ಇಟ್ಟಿರುವ ಕಾಡಾನೆಗಳ ಹೆಜ್ಜೆಗೆ ಕೃಷಿ ಭೂಮಿ ಮತ್ತು ಸಸಿಗಳು ನಾಶವಾಗಿವೆ. ಮುಂದಿನ ವರ್ಷದಿಂದ ಭತ್ತದ ಕೃಷಿ ಮಾಡುವುದಿಲ್ಲವೆಂದು ಸ್ಥಳೀಯ ಕೃಷಿಕರು ಘೋಷಿಸಿಕೊಂಡಿದ್ದಾರೆ.