ಮಡಿಕೇರಿಯಲ್ಲಿ ಹಿಂದೂ ಸಂಘಟನೆಗಳಿಂದ ಕಾರ್ಗಿಲ್ ಹುತಾತ್ಮರ ಸ್ಮರಣೆ

26/07/2020

ಮಡಿಕೇರಿ ಜು.26 : ಮಡಿಕೇರಿ ನಗರಸಭೆ ಬಳಿ ಇರುವ ಯುದ್ಧ ಸ್ಮಾರಕದಲ್ಲಿ ವಿವಿಧ ಹಿಂದೂ ಸಂಘಟನೆಗಳು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಿದವು. ನಿವೃತ್ತ ಮೇಜರ್ ಓ.ಎಸ್. ಚಿಂಗಪ್ಪ ಹಾಗೂ ಮಡಿಕೇರಿ ವಿಭಾಗದ ಪೊಲೀಸ್ ಉಪ ಅಧೀಕ್ಷಕ ದಿನೇಶ್ ಕುಮಾರ್ ಅವರುಗಳು ಪುಷ್ಪವಿಟ್ಟು ಅಗಲಿದ ಯೋಧರಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭ ಭಾರತೀಯ ಸೈನಿಕರಿಗೆ ಜೈಕಾರದ ಘೋಷಣೆಗಳನ್ನು ಕೂಗಲಾಯಿತು. ಮೌನಾಚರಣೆ ಮೂಲಕ ಹುತಾತ್ಮ ಯೋಧರ ಶೌರ್ಯವನ್ನು ಸ್ಮರಿಸಲಾಯಿತು.

ಈ ಸಂದರ್ಭ ಕೊಡಗು ಮಠಮಂದಿರ್ ಪ್ರಮುಖ್ ಚಿ.ನಾ.ಸೋಮೇಶ್, ಬಜರಂಗ ದಳದ ಚೇತನ್, ಕಮಲ್, ಪುದಿಯೊಕ್ಕಡ ರಮೇಶ್, ಅಖಿಲ ಭಾರತ್ ವಿದ್ಯಾರ್ಥಿ ಪರಿಷತ್‍ನ ವಿನಯ್, ಸತ್ಯ, ಸುರೇಶ್, ದೇಶ್‍ಪ್ರೇಮಿ ಯುವ ಸಂಘಟನೆಯ ಅರುಣ್ ಶೆಟ್ಟಿ, ಉಮೇಶ್ ಸುಬ್ರಮಣಿ ಮತ್ತಿತ್ತರರು ಹಾಜರಿದ್ದರು.

1999ರಲ್ಲಿ ಭಾರತ ದೇಶದ ಗಡಿಗೆ ನುಸುಳಿ, ಬೆನ್ನ ಹಿಂದೆ ಚೂರಿ ಹಾಕಿದ ಪಾಕ್ ಸೇನೆಯನ್ನು ಮಟ್ಟ ಹಾಕುವಲ್ಲಿ ಭಾರತೀಯ ರಕ್ಷಣಾ ಪಡೆ ಯಶಸ್ವಿಯಾಗಿತ್ತು. ದೇಶದ ವಿರುದ್ಧ ಕುತಂತ್ರ ಮಾಡುವವರನ್ನು ಎದುರಿಸಲು ಭಾರತೀಯ ಸೈನಿಕರು ಸದಾ ಸಿದ್ಧರಾಗಿರುತ್ತಾರೆ. ಗಡಿಯಲ್ಲಿದ್ದು ನಮ್ಮ ಜೀವವನ್ನು ಉಳಿಸುವ ಕೆಲಸ ಯೋಧರು ಮಾಡುತ್ತಿದ್ದು ಅವರನ್ನು ನಿತ್ಯ ಸ್ಮರಿಸಬೇಕು.

ಮೇಜರ್ ಓ.ಎಸ್. ಚಿಂಗಪ್ಪ.

ದೇಶ ಸೇವೆಗೆ ಯುವ ಜನತೆ ಮುಂದಾಗಬೇಕು. ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು. ಪೊಲೀಸ್ ಇಲಾಖೆಗೂ ಜನತೆ ಸಹಕಾರ ನೀಡಿದರೆ ಆಂತರಿಕ ಭದ್ರತೆಗೆ ತೊಡಕಾಗುವುದಿಲ್ಲ.

ಮಡಿಕೇರಿ ಡಿವೈಎಸ್ಪಿ ದಿನೇಶ್