ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ 93 ಮಂದಿಗೆ ಚಿಕಿತ್ಸೆ

26/07/2020

ಮಡಿಕೇರಿ ಜು.26 : ಜಿಲ್ಲೆಯಲ್ಲಿರುವ ಕೋವಿಡ್ ಸೋಂಕಿತರ ಪೈಕಿ 249 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆರು ಮಂದಿ ಸಾವಿಗೀಡಾಗಿದ್ದು, 93 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾನುವಾರ ಮಡಿಕೇರಿಯ ಸ್ಟ್ಟಿವರ್ಟ್‍ಹಿಲ್ ರಸ್ತೆಯ 43 ವರ್ಷದ ಪುರುಷ, ಆಜಾದ್ ನಗರದ ಜ್ವರ ಲಕ್ಷಣವಿದ್ದ 30 ವರ್ಷದ ಮಹಿಳೆ, ಪುಟಾಣಿನಗರದ 43 ವರ್ಷದ ಪುರುಷ, ಕುಶಾಲನಗರ ಸಮೀಪದ ಹುಲುಸೆ ಗ್ರಾಮದ 78 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.